ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಮಿತ್ರ ದ್ರೋಹಿಗಳು ಅರೆಸ್ಟ್‌

ಮದ್ಯದ ಅಮಲಿನಲ್ಲಿ ಗೆಳೆಯರ ಕಿತ್ತಾಟ
ವ್ಯಕ್ತಿಗೆ ಬೆಂಕಿ ಹಚ್ಚಿದ ಭೂಪರು

ಮದ್ಯದ ಅಮಲಿನಲ್ಲಿ ಗೆಳೆಯನ್ನೇ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬAಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಾರ್‌ನಲ್ಲಿ ಕುಡಿಯಲು ಹೋದವರು ಮದ್ಯದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಶೆಯ ಗುಂಗಿನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ್ದರು. ನಾಗೇಶ್ ಎಂಬಾತ ದಾಳಿ ತುತ್ತಾದವ. ಈತನ ಸ್ನೇಹಿತರಾದ ವೆಂಕಟಸ್ವಾಮಿ ಮತ್ತು ಮುನಿರಾಜು ದಾಳಿ ನಡೆಸಿದ್ದರು. 

ಕಳೆದ 22 ರಂದು ನಾಗೇಶ್, ವೆಂಕಟಸ್ವಾಮಿ ಮತ್ತು ಮುನಿರಾಜು ಒಟ್ಟಾಗಿ ಮದ್ಯ ಸೇವಿಸಲು ಆನೇಕಲ್ ಪಟ್ಟಣದಲ್ಲಿರುವ ಸಂಜಯ್ ಬಾರ್‌ಗೆ ಹೋಗಿದ್ದರು. ಒಂದೇ ಟೇಬಲ್‌ನಲ್ಲಿ ಕುಳಿತು ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಶುರುವಾಗಿತ್ತು. 

ಈ ವೇಳೆ ನಾಗೇಶ್ ಮೇಲೆ ಮದ್ಯವನ್ನು ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದರು. ಇತ್ತ ಸ್ನೇಹಿತರ ಹಚ್ಚಿದ ಬೆಂಕಿಗೆ ನಾಗೇಶ್‌ಗೆ ಶೇ. ೩೦ರಷ್ಟು ಸುಟ್ಟ ಗಾಯವಾಗಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ಸಂಬ0ಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಆನೇಕಲ್ ಪೊಲೀಸರು, ತಲೆಮರೆಸಿಕೊಂಡಿದ್ದ ವೆಂಕಟಸ್ವಾಮಿ ಮತ್ತು ಮುನಿರಾಜುರನ್ನು ಬಂಧಿಸಿದ್ದಾರೆ.