ಬೈಕಂಪಾಡಿ ಪ್ರದೇಶದಲ್ಲಿ ತ್ಯಾಜ್ಯ ನೀರನ್ನು ಸುರಿದು ಹೋಗುತ್ತಿರುವ ಟ್ಯಾಂಕರ್.!!

ಟ್ಯಾಂಕರ್ ಮೂಲಕ ರಸ್ತೆ ಬದಿಯಲ್ಲೇ ತ್ಯಾಜ್ಯ ನೀರು ವಿಲೇವಾರಿ - ಹಾಡಹಗಲೇ ಪರಿಸರ ನಾಶ - ಸ್ಥಳೀಯರ ಆಕ್ರೋಶ

ಮಂಗಳೂರು : ತ್ಯಾಜ್ಯ ನೀರನ್ನು ಟ್ಯಾಂಕರ್ ಗಳ ಮೂಲಕ ತುಂಬಿಕೊಂಡು  ಬಂದು ಹಾಡಹಗಲೇ ರಸ್ತೆ ಅಂಚಿನ ಕಾಲುವೆಗಳಿಗೆ ಹರಿದು ಬಿಡುತ್ತಿರುವ ದೃಶ್ಯ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಅಡ್ಕ ಹಾಲ್ ಹತ್ತಿರದಲ್ಲಿ ಕಂಡು ಬಂದಿದೆ.

ಮೊದಲೇ ತ್ಯಾಜ್ಯಗಳಿಂದ ಕೂಡಿರುವ ಕಾಲುವೆಗಳಿಗೆ ಮತ್ತೆ ಮತ್ತೆ ಈ ರೀತಿಯಾಗಿ ತಂದು ತ್ಯಾಜ್ಯ ನೀರು ಸುರಿದರೆೇ ಪರಿಸರದ ಪರಿಸ್ಥಿತಿ ಹೇಗೆ ಆಗಬೇಡ. ಪರಿಸರ ನಾಶದ ಜೊತೆಗೆ ಸ್ಥಳೀಯರಿಗೂ ಇದರಿಂದ ಬಹಳಷ್ಟು ತೊಂದರೆ ಇದೆ. 

ಆದರೆ ಯಾವುದೇ ಭಯವಿಲ್ಲದೇ ಹಾಡಹಗಲೇ "EMERGENCY ON AIRPORT DUTY" ಎನ್ನುವ ನಾಮಫಲಕ ಹೊಂದಿರುವ (KA 51 C 2499) ಟ್ಯಾಂಕರ್ ಬೈಕಂಪಾಡಿ KAIDB ಕ್ರಾಸ್ ಬಳಿ ಕಾಲುವೆಗೆ ತ್ಯಾಜ್ಯ ನೀರನ್ನು ಸುರಿದು ಹೋಗುತ್ತಿದ್ದಾರೆ.

ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದಿದೆ. ಇದಕ್ಕೆ ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.  ರಸ್ತೆ ಬದಿಗಳಲ್ಲಿ ರಾಶಿ ಬಿದ್ದಿರುವ ರಾಶಿ ರಾಶಿ ತ್ಯಾಜ್ಯ ಸಂಸ್ಕರಣೆಗೆ ಇನ್ನೂ ಸೂಕ್ತ ಹಾಗೂ ವೈಜ್ಞಾನಿಕ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ನಿರ್ಜನ ಪ್ರದೇಶದಲ್ಲೂ ತ್ಯಾಜ್ಯ ರಸ್ತೆ ಬದಿ ಎಸೆಯುವುದರಿಂದ ದುರ್ವಾಸನೆಯಿಂದ ಕೂಡಿದ್ದು, ಮಾರಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕಾಗಿದೆ.