ಕಾರ್ಕಳ: ಕಂಪೆನಿಯ ಯೂಸರ್ ನೇಮ್ ಹ್ಯಾಕ್ - 21.14 ಲಕ್ಷ ವಂಚನೆ

ಯೂಸರ್‌ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ

ಕಾರ್ಕಳ: ಕಂಪೆನಿಯ ಯೂಸರ್ ನೇಮ್ ಹ್ಯಾಕ್ ಮಾಡಿ ಇಂಡಿಯನ್ ಆರ್ಮಿಯ ವೆಬ್‌ಸೈಟ್‌ನಲ್ಲಿ ಬಿಡ್ ಮಾಡುವ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೆದಿಂಜೆ ಗ್ರಾಮದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲಕ ರಾಹುಲ್ ಎಂಬವರು ಇಂಡಿಯನ್ ಆರ್ಮಿಗೆ ಬಾದಾಮಿ ಪೂರೈಕೆ ಮಾಡುವ ಬಗ್ಗೆ ಭಾರತ ಸರಕಾರದ ಮಾನ್ಯತೆ ಪಡೆದ gem.gov.in ವೆಬ್‌ಸೈಟ್‌ನಲ್ಲಿ ಬಹಿರಂಗ ಹರಾಜಿನಲ್ಲಿ ಎ.30ರಂದು 5,12,500 ರೂ. ಹಣಕ್ಕೆ ಬಿಡ್ ಮಾಡಿದ್ದರು. ಅಪರಿಚಿತರು ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಯೂಸರ್ ನೇಮ್ ಹ್ಯಾಕ್ ಮಾಡಿ ಕಂಪನಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಕಂಪನಿಯ ಹೆಸರಿನಲ್ಲಿ ಒಟ್ಟು 21,14,731 ರೂ.ಗೆ ಇಂಡಿಯನ್ ಆರ್ಮಿಯ ವೆಬ್‌ಸೈಟ್‌ನಲ್ಲಿ ಬಿಡ್ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.