ವಿಚಿತ್ರ ಚಟವನ್ನು ಹೊಂದಿದ್ದ ಬಾಲಕಿ; ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು...

ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು...

ಬೀಜಿಂಗ್ : ಚೀನಾದ ಬಾಲಕಿ ತನ್ನ ಕೂದಲನ್ನು ತಿನ್ನುವ ವಿಚಿತ್ರ ಚಟವನ್ನು ಹೊಂದಿದ್ದು ಸದ್ಯ ಈಕೆಯ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರು ದಂಗಾಗಿದ್ದಾರೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಪಿಕಾ (14) ಎಂಬ ಯುವತಿಗೆ ಕೂದಲನ್ನು ಅಗೆಯುವ ಚಟವಿತ್ತು.

ಅವಳು ಹೀಗೆ ಅಗೆಯುತ್ತಾ ಅಗೆಯುತ್ತಾ ತನ್ನ ತಲೆಯಲ್ಲಿದ್ದ ಬರೊಬ್ಬರಿ 3 ಕೆಜಿ ಕೂದಲನ್ನು ತಿಂದಿದ್ದಾಳೆ. ಇದರ ಪರಿಣಾಮವಾಗಿ ಆಕೆಯ ತಲೆ ಬೋಳಾಗಿದೆ. ಆದರೆ ಪಿಕಾ ತಂದೆ- ತಾಯಿ ಕೆಲಸದ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿದ್ದು ಪಿಕಾ ವಯಸ್ಸಾಗಿದ್ದ ಅಜ್ಜಿ ಜೊತೆ ವಾಸಿಸುತ್ತಿದ್ದಳು.

ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಗೆ ಮೊದಲಿಗೆ ಕಾರಣ ತಿಳಿದಿರಲಿಲ್ಲ. ಇದರಿಂದಾಗಿ ಪಿಕಾಗೆ ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ.

ನಂತರ ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಕಂಡು ಬಂದಿದ್ದ ಕೂದಲನ್ನು ನೋಡಿ ದಂಗಾಗಿದ್ದಾರೆ. ಕೂದಲು ಹೊಟ್ಟೆಯ ತುಂಬೆಲ್ಲಾ ಇದ್ದು, ಕರುಳು ಕೂಡ ಬ್ಲಾಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ. ಈ ಬಗ್ಗೆ ವೈದ್ಯರು ಮಾತನಾಡಿ, ಆಕೆ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೂದಲನ್ನು ತಿನ್ನುವ ಚಟವನ್ನು ಬೆಳಸಿಕೊಂಡಳು ಎಂದು ತಿಳಿಸಿದರು.