ಹೊಸ ವರ್ಷಕ್ಕೆ ಹೊಸ ದಾಖಲೆ ಬರೆದ ತಿರುಪತಿ ದೇವಸ್ಥಾನ

ಒಂದೇ ದಿನ 7.6 ಕೋಟಿ ರೂ. ಕಾಣಿಕೆ ಸಂಗ್ರಹ

ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನವು ಹೊಸ ವರ್ಷದ ದಿನದಂದು ಹೊಸ ದಾಖಲೆ ಬರೆದಿದೆ. ಜನವರಿ 1ರಂದು ತಿರುಪತಿಯ ದೇವಸ್ಥಾನಕ್ಕೆ ದಾಖಲೆಯ 7.6 ಕೋಟಿ ರೂ. ದೇಣಿಗೆ ಸಿಕ್ಕಿದೆ. ಅತಿ ಹೆಚ್ಚು ಕಾಣಿಕೆ ಪಡೆಯುವ ದೇವಾಲಯವೆಂದು ಪ್ರಸಿದ್ಧಿ ಪಡೆದಿರುವ ತಿರುಪತಿಗೆ ಒಂದೇ ದಿನ ಇಷ್ಟು ಬಾರಿ ಮೊತ್ತದ ದೇಣಿಗೆ ಹರಿದುಬಂದಿದೆ. ಇದು ದೇವಸ್ಥಾನಕ್ಕೆ ಒಂದೇ ದಿನದಲ್ಲಿ ಬಂದ ಅತಿ ಹೆಚ್ಚು ಮೊತ್ತದ ಹುಂಡಿ ಕಾಣಿಕೆಯಾಗಿದೆ.

ಸೋಮವಾರ ವೈಕುಂಠ ಏಕಾದಶಿಯ ಗೌರವಾರ್ಥವಾಗಿ, ವಿಶ್ವದ ಶ್ರೀಮಂತ ಹಿಂದೂ ದೇವಾಲಯವಾದ ತಿರುಪತಿಗೆ ಉದಾರ ಕೊಡುಗೆಯನ್ನು ನೀಡಲಾಯಿತು. ಒಟ್ಟು ಮೊತ್ತವು 6.3 ಕೋಟಿ ರೂ.ಗಳಾಗಿದ್ದು, ಇದು ಭಾರತೀಯ ಇತಿಹಾಸದಲ್ಲಿ ಅತಿದೊಡ್ಡ ಏಕದಿನದ ಕಾಣಿಕೆಯಾಗಿದೆ.

ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಸಾವಿರಾರು ಭಕ್ತರು 7 ಬೆಟ್ಟಗಳ ಭಗವಂತ ತಿಮ್ಮಪ್ಪನ ಆಶೀರ್ವಾದಕ್ಕಾಗಿ ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಕಿಲೋಮೀಟರ್‌ಗಳವರೆಗೆ ಜನರ ಸಾಲುಗಳಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ದೇವಸ್ಥಾನದಲ್ಲಿ ಕೋವಿಡ್ -19 ಮಿತಿಗಳನ್ನು ಸಡಿಲಗೊಳಿಸಿದಾಗಿನಿಂದ ದೇವಾಲಯದ ಟ್ರಸ್ಟ್ ಬೋರ್ಡ್ ಪ್ರತಿ ತಿಂಗಳು ಭಾರೀ ಪ್ರಮಾಣದ ಹುಂಡಿ ಸಂಗ್ರಹವನ್ನು ಪಡೆಯುತ್ತಿದೆ.

ಈ ತಿರುಪತಿ ತಿರುಮಲ ದೇವಾಲಯದ ಉಸ್ತುವಾರಿ ವಹಿಸಿರುವ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಪ್ರಕಾರ, ದೇಗುಲಕ್ಕೆ ದೇಣಿಗೆ ನೀಡಿದ ಹುಂಡಿಯ ಮೊತ್ತವು 2012 ಮತ್ತು 2022ರ ನಡುವೆ ಸುಮಾರು ದ್ವಿಗುಣಗೊಂಡಿದೆ. ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಪ್ರತಿ ದಿನ ಸರಾಸರಿ 6 ಕೋಟಿ ದೇಣಿಗೆ ಬರುತ್ತಿದೆ. ಇತರ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಪ್ರತಿ ತಿಂಗಳಿಗೆ 4 ಕೋಟಿ ರೂ. ದೇಣಿಗೆ ಬರುತ್ತಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಕೋವಿಡ್ -19 ಹರಡುವ ಮೊದಲು ತಿರುಮಲ ದೇಗುಲದಲ್ಲಿ ಮಾಸಿಕ ಹುಂಡಿ ಕಾಣಿಕೆ 90ರಿಂದ 115 ಕೋಟಿ ರೂ.