ಡಿಫರೆಂಟ್ ಮನೆಗಳ್ಳನ ಅಚ್ಚರಿಯ ಸ್ಟೋರಿ.!! ನಟೋರಿಯಸ್ ಮನೆಗಳ್ಳ ಟಚ್ ಗಣೇಶ್ ಅರೆಸ್ಟ್

ಡಿಫರೆಂಟ್ ಮನೆಗಳ್ಳನ ಅಚ್ಚರಿಯ ಸ್ಟೋರಿ.!!

ನಟೋರಿಯಸ್ ಮನೆಗಳ್ಳ ಟಚ್ ಗಣೇಶ್ ಅರೆಸ್ಟ್

ಮನೆಗಳಿಗೆ ಕನ್ನ ಹಾಕುತ್ತಿದ್ದ ನಟೋರಿಯಸ್ ಮನೆಗಳ್ಳನನ್ನು ನಗರದ ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟೋರಿಯಸ್ ಮನೆಗಳ್ಳ ಗಣೇಶ್ ಅಲಿಯಾಸ್ ಟಚ್ ಗಣೇಶ್ ಬಂಧಿತ ಆರೋಪಿಯಾಗಿದ್ದಾನೆ. ಬೀಗ ಹಾಕಿರೋ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದ ಈತನಿಂದ ಪೊಲೀಸರು 500 ಗ್ರಾಂ ತೂಕದ ಚಿನ್ನಾಭರಣ‌ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ. ಟಚ್ ಗಣೇಶ ಮಾಡುತ್ತಿದ್ದ ಕಳ್ಳತನದ ಹಿಂದೆ ಮಾಸ್ಟರ್ ಪ್ಲಾನ್ ಕೂಡ ಇದೆ. ಈ ಮಾಸ್ಟರ್ ಪ್ಲಾನ್ ಡಿಫರೆಂಟ್ ಆಗಿದೆ.

ಅತ್ಯಂತ ನಟೋರಿಸಯ್ ಕಳ್ಳನಾಗಿರುವ ಈ ಟಚ್ ಗಣೇಶ, ಸಣ್ಣ ಪುಟ್ಟ ಐಟಂ ನಿಂದ ಹಿಡಿದು ಯಾವುದೇ ದೊಡ್ಡ ಮಾಲು ಸಿಕ್ಕಿದರೂ ಬಿಡುವುದಿಲ್ಲ. ಈತ ಬರೋಬ್ಬರಿ 25ಕ್ಕೂ ಹೆಚ್ಚು ಮನೆಗಳಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿದ್ದು, ಈತನ ಮೇಲೆ 18 ಪ್ರಕರಣಗಳು ದಾಖಲಾಗಿವೆ. ಮನೆಗಳ್ಳತನಕ್ಕೂ ಮುನ್ನ ಆರೋಪಿ ಕಾರ್ ಮೂಲಕ ರೌಂಡ್ ಹಾಕುತ್ತಾನೆ. ಅದರಂತೆ ತನ್ನ ಕಣ್ಣಿಗೆ ಮನೆಯಲ್ಲಿ ಯಾರು ಇಲ್ಲದಿರುವುದು ಕಂಡರೆ ಆ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದನು.

ಈ ಟಚ್ ಗಣೇಶನ ಕಳ್ಳತನ‌ ಕಹಾನಿಯೇ ಡಿಫರೆಂಟ್ ಆಗಿದೆ. ಹೈಫೈ ಮನೆಗಳ ಸಹವಾಸಕ್ಕೆ ಹೋಗುತ್ತನೇ ಇರಲಿಲ್ಲ. ಇದಕ್ಕೆ ಕಾರಣ ದೊಡ್ಡ ಮನೆಗಳಿಗೆ ಹೋದರೆ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ. ಮದ್ಯಮವರ್ಗ, ಬಡವರ ಮನೆ ಬಿಡುತ್ತಲೇ ಇರಲಿಲ್ಲ. ಮನೆಗಳಿಗೆ ನುಗ್ಗುವ ಮುನ್ನ ಮನೆಗಳ ಮುಂದೆ ಧೂಳು ಇದೆಯಾ ಎಂದು ನೋಡುತ್ತಾನೆ. ಯಾಕಂದರೆ ಪೇಪರ್ ಮತ್ತು ಹಾಲು ಹಾಕಿಸಲ್ಲ, ಮನೆಯವರು ಇಲ್ಲ ಎಂದು ಈತ ತಿಳಿದುಕೊಳ್ಳುತ್ತಾನೆ.

ರಂಗೋಲಿ ಹಾಕದೆ ಇರುವ ಮನೆ, ರಂಗೋಲಿ ಹೆಚ್ಚು ಅಳಸಿರುವ ಮನೆಗಳನ್ನ ಕೂಡ ಈತ ಟಾರ್ಗೆಟ್ ಮಾಡುತ್ತಿದ್ದನು. ಒಮ್ಮೆ ಮನೆಗೆ ಹೋದರೆ ಟಿವಿ, ಚಿನ್ನ, ಬೆಳ್ಳಿ ಏನನ್ನೂ ಬಿಡದೆ ದೋಚಿ ಪರಾರಿಯಾಗುತ್ತಿದ್ದನು. ಹೀಗೆ ಒಂದು ದಿನ ಮನೆಗೆ ನುಗ್ಗಿದಾಗ ಕಾರು ಕೀ ಸಿಕ್ಕಿದೆ, ಅದರಂತೆ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕದ್ದು ತಂದಿದ್ದನು.

ಈತನ ವಿರುದ್ಧ ಜ್ಞಾನಭಾರತಿ, ಆರ್.ಆರ್.ನಗರ, ವಿದ್ಯಾರಣ್ಯಪುರ ಸೇರಿ ಒಟ್ಟು 18 ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಮತ್ತೆ ಮೊದಲಿನ ಛಾಳಿಯನ್ನೇ ಮುಂದುವರಿಸಿದ್ದಾನೆ. ಸದ್ಯ ಕೋಣನಗುಂಟೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 3 ಕೆಜಿ ಬೆಳ್ಳಿ ವಸ್ತುಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವಸ್ತುಗಳಲ್ಲಿ ಬೆಳ್ಳಿಯ ಲಕ್ಷ್ಮಿ ಮುಖವಾಡವೂ ಪತ್ತೆಯಾಗಿದೆ.