11 ಉಗ್ರರ ಕೊಂದ ಪಾಕಿಸ್ತಾನ ಭದ್ರತಾ ಪಡೆ

11 ಉಗ್ರರ ಕೊಂದ ಪಾಕಿಸ್ತಾನ ಭದ್ರತಾ ಪಡೆ

ಇಸ್ಲಾಮಾಬಾದ್: ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಗಡಿಯಲ್ಲಿ 11 ಉಗ್ರರನ್ನು ಪಾಕಿಸ್ತಾನ ಕೊಂದು ಹಾಕಿದೆ.

ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ಮಿಲಿಟರಿ ಭಯೋತ್ಪಾದನಾ ನಿಗ್ರಹ ದಾಳಿಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಕನಿಷ್ಠ 11 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ದಕ್ಷಿಣ ವಜಿರಿಸ್ತಾನ್ ಜಿಲ್ಲೆಯಲ್ಲಿನ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಉನ್ನತ ಮಟ್ಟದ ಭಯೋತ್ಪಾದಕ ಚಟುವಟಿಕೆಯನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ.

ಆತ್ಮಹತ್ಯಾ ಬಾಂಬರ್‌ ಗಳು ಮತ್ತು ಪ್ರಮುಖ ಕಮಾಂಡರ್ ಸೇರಿದಂತೆ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಅಥವಾ ಪಾಕಿಸ್ತಾನಿ ತಾಲಿಬಾನ್‌ನ ಸದಸ್ಯರು ಕೊಲ್ಲಲ್ಪಟ್ಟಿದ್ದಾರೆ. ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಇವರು ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.