ಮಂಗಳೂರು: ಎನ್‍ಐಎ ದಾಳಿ- ಉಡುಪಿ ಮೂಲದ ವಿದ್ಯಾರ್ಥಿ ರಿಶಾನ್ ಸಹಿತ ಇಬ್ಬರ ಬಂಧನ

ಕುಕ್ಕರ್ ಬ್ಲಾಸ್ಟ್ ಆರೋಪಿ ಜೊತೆ ಲಿಂಕ್-ವಿದ್ಯಾರ್ಥಿಯ ಮನೆಯಲ್ಲಿ ಶೋಧ

ಮಂಗಳೂರು: ಮಂಗಳೂರಿನಲ್ಲಿ ಉಗ್ರವಾದದ ಪರ ಗೋಡೆ ಬರಹ ಪ್ರಕರಣ, ಶಿವಮೊಗ್ಗದಲ್ಲಿ ಉಗ್ರಸಂಚು, ಪ್ರಾಯೋಗಿಕ ಬಾಂಬ್ ಸ್ಟೋಟ ನಡೆಸಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ನೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ನಗರದ ಹೊರವಲಯದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ರಿಶಾನ್ ಶೇಖ್ ಸಹಿತ ಇಬ್ಬರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ರಿಶಾನ್ ನೊಂದಿಗೆ ಶಿವಮೊಗ್ಗ ಜಿಲ್ಲೆಯ ಟಿಪ್ಪು ಸುಲ್ತಾನ್ ನಗರದ ಹುಜೈರ್ ಫರ್ಹಾನ್ ಬೇಗ್ ಎಂಬಾತನನ್ನೂ ಬಂಧಿಸಲಾಗಿದ್ದು, ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‍ಐಎ ತಿಳಿಸಿದೆ.

ಇನ್ನು ನಡುಪದವಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ರಿಶಾನ್ ತಾಜುದ್ದೀನ್ ಶೇಖ್ ನನ್ನು ಎನ್‍ಐಎ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದಿದ್ದು, ಇವರಿಬ್ಬರೂ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಟೋಟ ನಡೆಸಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಮಾಝ್ ಮುನೀರ್ ಜತೆ ನೇರವಾಗಿ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ರಿಶಾನ್ ತನಗೆ ಮಾಝ್ ಮುನೀರ್ ನ ಪರಿಚಯವಿದೆ ಆದರೆ ಕುಕ್ಕರ್ ಬಾಂಬ್ ಸ್ಟೋಟದ ಆರೋಪಿ ಸಾರೀಕ್ ನ ಪರಿಚಯ ಇಲ್ಲ ಎಂದು ಹೇಳಿರುವುದಾಗಿ ಎನ್‍ಐಎ ತಿಳಿಸಿದೆ.

ಶಿವಮೊಗ್ಗ ಪ್ರಕರಣದಲ್ಲಿ ಸಯ್ಯದ್ ಯಾಸೀನ್ ಬಂಧನದ ಬಳಿಕ ಮಾಝ್ ಮುನೀರ್ ನನ್ನು ಬಂಧಿಸಿದ್ದು, ಇವರ ಸಹವರ್ತಿಯಾಗಿದ್ದು, ಮಂಗಳೂರಿನ ಗೋಡೆ ಬರಹ ಬರೆದಿದ್ದ ಶಾರೀಕ್ ಮಂಗಳೂರಿನಲ್ಲಿ ಇತ್ತೀಚೆಗೆ ಕುಕ್ಕರ್ ಬಾಂಬ್ ಸ್ಟೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದು ಎನ್‍ಐಎ ವಶದಲ್ಲಿದ್ದಾನೆ.

ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ನ ಉಡುಪಿ ಜಿಲ್ಲೆಯ ಬ್ರಹ್ಮಾವರದ ವಾರಂಬಳ್ಳಿಯಲ್ಲಿರುವ ಫ್ಲಾಟ್‌ ನಲ್ಲಿರುವ ಮನೆ ಮಹಜರು ನಡೆಸಿತು.

ಬೆಂಗಳೂರಿನಿಂದ ಆಗಮಿಸಿದ್ದ ಎನ್ ಐ ಎ ಅಧಿಕಾರಿಗಳ ತಂಡ ಗುರುವಾರ ದಿನ ಪೂರ್ತಿ ಫ್ಲ್ಯಾಟ್ ನಲ್ಲಿ ಮಹಜರು ನಡೆಸಿ ಕೆಲವು ಅಮೂಲ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದೇ ಸಂದರ್ಭ ರಿಹಾನ್ ಕುಟುಂಬದ ಸದಸ್ಯರನ್ನು ಕೂಡಾ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಬಳಿಕ ಸಂಜೆ ಹೊತ್ತಿಗೆ ಶಂಕಿತ ಯುವಕನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಎನ್‍ಐಎ ಗುರುವಾರ ವಶಕ್ಕೆ ಪಡೇದಿರುವ ರಿಶಾನ್ ತಾಜುದ್ದೀನ್ ಶೇಖ್ ಶಂಕಿತ ಉಗ್ರ ಮಾಝ್ ಮುನೀರ್ ಸಂಪರ್ಕದಲ್ಲಿರುವುದರ ಹಿನ್ನಲೆಯಲ್ಲಿ ಎನ್‍ಐಎ ಅಧಿಕಾರಿಗಳು ಆತನಿಗಾಗಿ ಬಲೆ ಬೀಸಿದ್ದರು.