ಉಗ್ರ ಬೆಂಬಲಿತ ಎರಡು ಸಂಘಟನೆಗಳ ನಿಷೇಧಿಸಿದ ಕೇಂದ್ರ

ಯುವಕರಿಗೆ ಭಯೋತ್ಪಾದನೆಗಳತ್ತ ಪ್ರೇರಣೆ.!

ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮವನ್ನು ಮುಂದುವರಿಸಿರುವ ಕೇಂದ್ರ ಸರ್ಕಾರ ಉಗ್ರ ಸಂಘಟನೆಗಳ ಬೆಂಬಲಿತ ಎರಡು ಸಂಘಟನೆಗಳ ಮೇಲೆ ನಿಷೇಧ ಹೇರಿದೆ.

ಲಷ್ಕರ್‌-ಇ-ತಯ್ಯಬಾ ಬೆಂಬಲಿತ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮತ್ತು ಜೈಷ್‌-ಇ-ಮೊಹಮ್ಮದ್‌ ಉಗ್ರ ಸಂಘಟನೆಗಳ ಬೆಂಬಲಿತ ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್-ಫ್ರಂಟ್ (ಪಿಎಎಫ್‌ಎಫ್‌) ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆನ್‌ಲೈನ್ ಮುಖಾಂತರ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳತ್ತ ಪ್ರೇರೇಪಿಸುವ ಕೆಲಸವನ್ನು ಇವುಗಳು ಮಾಡುತ್ತಿದ್ದವು ಎನ್ನಲಾಗಿದೆ.

ಇನ್ನು ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಾಲ್ಕು ಮಂದಿಯನ್ನು ನಿರ್ದಿಷ್ಟ ಉಗ್ರರು ಎಂಬುದಾಗಿ ಸರ್ಕಾರ ಘೋಷಿಸಿದೆ. ಭಯೋತ್ಪಾದನೆ ವಿರುದ್ದ ಕೇಂದ್ರ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶೋ ಪುನರುಚ್ಚಾರ ಮಾಡಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ.