ಮಂಗಳೂರು: ಹೆಚ್ಚಾದ ಚಿರತೆ ದಾಳಿ - ಅಪಾಯದಲ್ಲಿ ಜನತೆ

ಹೆಚ್ಚಾದ ಚಿರತೆ ದಾಳಿ - ಅಪಾಯದಲ್ಲಿ ಜನತೆ

ಮಂಗಳೂರು: ಚಿರತೆಗಳ ದಾಳಿ ಹೆಚ್ಚಾಗಿದ್ದು, ಭಯದ ವಾತಾವರಣ ಸೃಷ್ಟಿಯಾದ ಘಟನೆ ಪೆರ್ಮುದೆ ತೆಂಕಎಕ್ಕಾರು ಪ್ರದೇಶದಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ನಾಯಿಯನ್ನು ಚಿರತೆ ಅಟ್ಟಿಸಿ ಬಂದದ್ದು ಸಿ. ಸಿ. ಟಿವಿ ಯಲ್ಲಿ ದಾಖಲಾಗಿತ್ತು. ಈಗ ಹಾಡು ಹಗಲೇ ಕರುವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದೆ.

ಮಂಗಳವಾರ ಚಿರತೆ ಕರುವಿನ ಮೇಲೆ ದಾಳಿ ನಡೆಸಿದ್ದು, ನಾಯಿಗಳು ಬೊಗಳುವ ಸದ್ದಿಗೆ ರೈತ ಪಾಸ್ಕಲ್  ಅವರು ಮನೆಯಿಂದ ಓಡಿ ಬಂದಿರುವ ಕಾರಣ ಚಿರತೆ ಅಲ್ಲಿಂದ ಓಡಿದೆ. 

ಈವರೆಗೆ ಕೇವಲ ನಾಯಿಗಳನ್ನು ಮಾತ್ರ ಕೊಂಡೊಯ್ಯುವ ಚಿರತೆಗಳು ದನಕರುಗಳ ಮೇಲೂ ದಾಳಿ ನಡೆಸಲು ಆರಂಭಿಸಿವೆ. ಅರಸುಪದವಿನಲ್ಲಿ ಕೂಡ ಹಸುವಿನ ಕರುವಿನ ಮೇಲೆ ದಾಳಿ ಮಾಡಿ ತಿಂದು ಹೋಗಿತ್ತು, ಪೆರ್ಮುದೆ, ತೆಂಕ ಎಕ್ಕಾರು ಗ್ರಾಮಗಳು ಗುಡ್ಡ ಕಾಡು, ಕೃಷಿ ತೋಟ ಪ್ರದೇಶವಾಗಿದ್ದು ಜನರು ನಡೆದಾಡಲು ಹೆದರುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಶಾಲೆಗೆ ನಡೆದು ಕೊಂಡು ಹೋಗುತ್ತಿದ್ದು ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಬೇಕು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಹಾಗೂ ಸಾಕುಪ್ರಾಣಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿಪಿಂಟೋ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.