ಹೆಬ್ರಿ: ಜಾನುವಾರುಗಳನ್ನು ಯದ್ವತದ್ವವಾಗಿ ವಾಹನಕ್ಕೆ ತುಂಬಿಸಿ, ಕುತ್ತಿಗೆಗೆ ಹುರಿಹಗ್ಗವನ್ನು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ

ಹಿಂಸಾತ್ಮಕವಾಗಿ ಗೋ ಸಾಗಾಟ

ಹೆಬ್ರಿ: ಬೊಲೇರೋ ವಾಹನದಲ್ಲಿ ಜಾನುವಾರುಗಳನ್ನು ಯದ್ವತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ, ಅವುಗಳ ಕುತ್ತಿಗೆಗೆ ಹುರಿಹಗ್ಗವನ್ನು ಕಟ್ಟಿ ಹಿಂಸಾತ್ಮಕವಾಗಿ ಖಾಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಕಣ್ಣಿಗೆ ಬಿದ್ದು ಪರಾರಿಯಾಗಿದ್ದಾರೆ.

12/01/2023 ರಂದು ಮುಂಜಾನೆ ಹೆಬ್ರಿಯ ಸೀತಾನದಿ ಕೈಕಂಬದ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವಾಗ ಮುಂಜಾನೆ 4-00 ಗಂಟೆಗೆ ನಾಡ್ಪಾಲು ಕಡೆಯಿಂದ ಒಂದು ವಾಹನವು ಅತೀವೇಗವಾಗಿ ಬರುತ್ತಿರುವುದನ್ನು ನೋಡಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ನಿಲ್ಲಿಸದೇ ಮುದ್ರಾಡಿ ಕಡೆಯ ರಸ್ತೆಗೆ ತಿರುಗಿಸಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು. ಪೊಲೀಸರು ವಾಹನವನ್ನು ಬೆನ್ನಟ್ಟಿದ್ದಾಗ ಆತನು ಅಜಾಗರುಕತೆಯಿಂದ ಚಲಾಯಿಸಿ ಹೆಬ್ರಿ ಗ್ರಾಮದ ಬಚ್ಚಪ್ಪು ಜಂಕ್ಷನ್ ಬಳಿ ತಲುಪಿದಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ 3 ಜನರು ವಾಹನದಿಂದ ಇಳಿದು ಕಾಡಿಗೆ ಓಡಿ ತಪ್ಪಿಸಿ ಕೊಂಡಿದ್ದಾರೆ ಎನ್ನಲಾಗಿದೆ.

ವಾಹನದ ಒಳಬದಿಯ ಸೀಟ್‌ ತೆಗೆದು ಒಂದು ನೀಲಿಬಣ್ಣದ ಟಾರ್ಪಲ್ ನ್ನು ಹಾಕಿ ಅದರ ಮೇಲೆ 05 ಜಾನುವಾರು ಗಳನ್ನು ಯದ್ವತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಹುರಿಹಗ್ಗವನ್ನು ಕಟ್ಟಿದ್ದರು.  ಜಾನುವಾರುಗಳನ್ನು  ಎಲ್ಲಿಂದಲೂ ಕಳವುಮಾಡಿ ಹಿಂಸಾತ್ಮಕವಾಗಿ ಖಾಸಾಯಿ ಖಾನೆಗೆ ಸಾಗಿಸುತ್ತಿದ್ದರು. ಆರೋಪಿತರುಗಳ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.