ಸುಲಿಗೆ ಮಾಡೋ ಪೊಲೀಸ್ರಿಗೆ ಕಡಿವಾಣ ಹಾಕಲು ಹೊಸ ಪ್ರಯತ್ನ

ಬಾಡಿವೋರ್ನ್ ಕ್ಯಾಮೆರಾ ಬಳಕೆ.!!

ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ವಿರುದ್ಧದ ಆರೋಪಿಗಳಿಗೆ ಕಡಿವಾಣ ಹಾಕಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅಮಾಯಕರನ್ನ ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ಬಳಕೆಗೆ ಚಾಲನೆ ನೀಡಲಾಗಿದೆ.

ಆ ಮೂಲಕ ಬಾಡಿವೋರ್ನ್ ಕ್ಯಾಮೆರಾ ಬಳಸಿದವರಲ್ಲಿ ಆಗ್ನೇಯ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಮೊದಲಿಗರು ಎಂದು ಎನಿಸಿಕೊಂಡಿದ್ದಾರೆ. ರಾತ್ರಿ ತಪಾಸಣೆ ವೇಳೆ ಬಾಡಿವೋರ್ನ್ ಕ್ಯಾಮೆರಾ ಬಳಕೆಗೆ ಚಾಲನೆ ನೀಡಲಾಗಿದ್ದು,

ಮೊದಲ ಹಂತದಲ್ಲಿ 50 ಬಾಡಿ ವೋರ್ನ್ ಕ್ಯಾಮೆರಾ ಬಳಕೆ ಮಾಡಲು ಮುಂದಾಗಿದ್ದಾರೆ. ಆ ಮೂಲಕ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಅಥವಾ ತಪಾಸಣೆ ಮಾಡುವ ಪೊಲೀಸ್ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಧರಿಸಿ ತಪಾಸಣೆ ಮಾಡಬೇಕು. ಈ ಕ್ಯಾಮೆರಾ ಬಳಕೆಯಿಂದಾಗಿ ಪೊಲೀಸರ ನಡವಳಿಕೆಯನ್ನು ನೋಡಿಕೊಳ್ಳಬಹುದು. ಬಾಡಿವೋರ್ನ್ ಕ್ಯಾಮೆರಾ ಬಳಕೆ ಮಾಡುವ ಪೊಲೀಸರ ಪ್ರತಿ ನಿತ್ಯದ ವಿಡಿಯೋ ರೆಕಾರ್ಡ್​ ಅನ್ನು ಡಿಸಿಪಿ ಮಾನಿಟರಿಂಗ್ ಮಾಡುತ್ತಾರೆ. ಈ ಮೂಲಕ ಪೊಲೀಸರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಡಿಸಿಪಿ ಸಿ.ಕೆ.ಬಾಬಾ ಅವರು ಮುಂದಾಗಿದ್ದಾರೆ.