ಹಿಂದೂ ಕಾರ್ಯಕರ್ತ ರಾಜೇಶ್ ಮೃತದೇಹ ನದಿಯಲ್ಲಿ ಪತ್ತೆ- "ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ"

ಹಿಂದೂ ಕಾರ್ಯಕರ್ತ ರಾಜೇಶ್ ಮೃತದೇಹ ನದಿಯಲ್ಲಿ ಪತ್ತೆ- "ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ"

ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಮೃತ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಜೀಪ ನಡುಗ್ರಾಮದ ಸಾನದ ಮನೆ ನಿವಾಸಿ ರಾಜೇಶ್ ಪೂಜಾರಿ ಅವರ ಮೃತದೇಹ ಪಾಣೆಮಂಗಳೂರು ಹಳೆ ಸೇತುವೆಯ ಅಡಿಯಲ್ಲಿ ನೇತ್ರಾವತಿ ನದಿಯಲ್ಲಿ ಸಿಕ್ಕಿದೆ.

ಘಟನೆಯ ವಿವರ

ರಾಜೇಶ್ ಅವರು ಬುಧವಾರ ಬೆಳಿಗ್ಗೆ 8.30 ಗಂಟೆ ಗೆ ಮನೆಯಿಂದ ಕೆಲಸಕ್ಕೆ ಹೋದವರು ಮನೆಗೆ ವಾಪಸು ಬಂದಿರಲಿಲ್ಲ. ರಾಜೇಶ್ ಪೂಜಾರಿ ಅವರ ಸಂಬಂಧಿ ಧೀರಜ್ ಅವರು ಮನೆಯವರಿಗೆ ಕರೆ ಮಾಡಿ ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬಿದ್ದ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮನೆಯವರು ಹಾಗೂ ಸ್ಥಳೀಯ ರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಕೂಟರ್ ಸೇತುವೆಯಲ್ಲಿ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ರಾಜೇಶ್ ನಾಪತ್ತೆಯಾಗಿದ್ದರು.

ರಾಜೇಶ್ ನದಿಗೆ ಬಿದ್ದಿರಬಹುದು ಎಂಬ ಸಂಶಯದಲ್ಲಿ ಪೋಲೀಸರು ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ನೇತ್ರಾವತಿ ನದಿಯಲ್ಲಿ ಹುಡುಕಿದಾಗ ಸುಮಾರು 10.30 ಗಂಟೆಗೆ ಮೃತದೇಹ ಪತ್ತೆಯಾಗಿದೆ. ಅಪಘಾತ ಸಂಭವಿಸಿ ರಾಜೇಶ್ ನದಿಗೆ ಬಿದ್ದು ಸಾವನ್ನಪ್ಪಿದಾರೋ ಅಥವಾ ಬೇರೆ ಯಾವ ಕಾರಣಗಳಿರಬಹದೋ ಎಂಬುದು ಮೃತದೇಹದ ಮರಣೋತ್ತರ ಪರೀಕ್ಷೆ ಹಾಗೂ ಪೋಲೀಸ್ ತನಿಖೆಯಿಂದ ಮಾಹಿತಿ ಬಯಲಾಗಲಿದೆ.

ಆದರೆ ಈ ಸಾವಿನ ಬಗ್ಗೆ ಸಂಶಯವಿದ್ದು, ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲು ಮಾಡಲಾಗಿದೆ. ಸಾವಿನ ಬಗ್ಗೆ ಮನೆಯವರು, ಸ್ಥಳೀಯರು ಹಾಗೂ ಹಿಂದೂ ಸಂಘಟನೆಯ ಪ್ರಮುಖರು ಸಂಶಯ ವ್ಯಕ್ತಪಡಿಸಿದ್ದಲ್ಲದೆ ಉನ್ನತ ಮಟ್ಟದ ತನಿಖೆಗೂ ಒತ್ತಾಯ ಮಾಡಿದ್ದಾರೆ.

ಘಟನ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಬೇಟಿ ನೀಡಿ ವಿವಿಧ ಅಯಾಮಗಳಲ್ಲಿ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬರುವ ವರೆಗೆ ಯಾವುದೇ ಮಾಹಿತಿ ನೀಡಲು ಅಸಾಧ್ಯ. ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇನೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ಧಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.