ಜೀವಂತ 17 ಕಾಳಿಂಗ ಸರ್ಪ, 55 ಹೆಬ್ಬಾವು, ಆರು ಕೋತಿಗಳ ಸ್ಮಗ್ಲಿಂಗ್.!
ಬ್ಯಾಗ್ ನೋಡಿ ಬೇಚ್ಚಿಬಿದ್ದ ಅಧಿಕಾರಿಗಳು.!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅವನ ಬ್ಯಾಗ್‌ ನೋಡಿ ಬೆಚ್ಚಿಬಿದ್ದಿದ್ದರು. ಯಾಕೆಂದರೆ, ಥಾಯ್ಲೆಂಡ್‌ನಿಂದ ಬಂದ ಆ ವ್ಯಕ್ತಿಯ ಬ್ಯಾಗ್‌ನಲ್ಲಿತ್ತು 17 ಅತಿ ವಿಷಕಾರಿ ಕಾಳಿಂಗ ಸರ್ಪ , 55 ಚೆಂಡು ಹೆಬ್ಬಾವು ಮತ್ತು ಆರು ಕಾಪುಚಿನ್‌ ಕೋತಿ ಮರಿ! ಅಂದರೆ ಒಟ್ಟು 78 ಪ್ರಾಣಿಗಳು.!

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜೀವಂತವಾಗಿರುವ 17 ಕಾಳಿಂಗ ಸರ್ಪ 55 ಹೆಬ್ಬಾವು ಸೇರಿದಂತೆ 78 ಪ್ರಾಣಿಗಳನ್ನು ಕಳ್ಳ ಸಾಗಾಣಿಗೆಯನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ - 17 ಕಾಳಿಂಗ ಸರ್ಪ ಸೇರಿದಂತೆ 55 ಜೀವಂತ ಹೆಬ್ಬಾವು  ಸ್ಮಗ್ಲಿಂಗ್....!! - themangaloremirror.in

ಬ್ಯಾಕಾಂಕ್ ನಿಂದ ಎರ್ ಏಶಿಯಾ ವಿಮಾನದಲ್ಲಿ ಬಂದ್ ಬ್ಯಾಗೇಜ್ ನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಗ್ ಗಳಲ್ಲಿ 17 ಕಾಳಿಂಗ ಸರ್ಪ 55 ಬಾಲ್ ಹೆಬ್ಬಾವು, 6 ಮಂಗಗಳು ಇದ್ದವು, ಅದರಲ್ಲಿ ಮಂಗಗಳು ಸಾವನಪ್ಪಿದ್ದು, ಮತ್ತೆ ಉಳಿದ ಪ್ರಾಣಿಗಳು ಜೀವಂತ ಇದ್ದವು.

ಬೆಂಗಳೂರು ವಿಮಾನ ನಿಲ್ದಾಣ - 17 ಕಾಳಿಂಗ ಸರ್ಪ ಸೇರಿದಂತೆ 55 ಜೀವಂತ ಹೆಬ್ಬಾವು  ಸ್ಮಗ್ಲಿಂಗ್....!! - themangaloremirror.in

1962 ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110 ರ ಅಡಿಯಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೀವಂತ ಪ್ರಾಣಿಗಳನ್ನು ಮೂಲದ ದೇಶಕ್ಕೆ ಗಡೀಪಾರು ಮಾಡಲಾಗಿದೆ ಮತ್ತು ಸತ್ತ ಪ್ರಾಣಿಗಳನ್ನು ಸರಿಯಾದ ನೈರ್ಮಲ್ಯ ಕ್ರಮಗಳೊಂದಿಗೆ ವಿಲೇವಾರಿ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!