
ವಿಹಾರಕ್ಕೆ ತೆರಳಿದ್ದಾಗ ನಡೆಯಿತು ದುರಂತ - ಯುವಕ ಮೃತ್ಯು
ಕಾಸರಗೋಡು: ಮಂಗಳೂರಿನಿ0ದ ವಯನಾಡಿಗೆ ವಿಹಾರಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರಿನ ಕಡಂಪೇರಿ ಚಿರಾದಲ್ಲಿ ಈ ಘಟನೆ ನಡೆದಿದೆ. ಪುತ್ತೂರು ಮೂಲದ ಮೊಹಮ್ಮದ್ ಆಸಿನ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಗೆಳೆಯರೊಂದಿಗೆ ಸ್ನಾನಕ್ಕೆ ಇಳಿದಾಗ ಈ ಅವಘಡ ಸಂಭವಿಸಿದೆ. ವಿದ್ಯಾರ್ಥಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
Comments
0 comment