ಎರಡು ಲಕ್ಷದ ನಾಯಿಗೆ ಬೇಡಿಕೆ ಇಟ್ಟ ಮಗ - ಮನೆಬಿಟ್ಟ ತಾಯಿ; ಪುತ್ರ ಸಾವಿಗೆ ಶರಣು
ಎರಡು ಲಕ್ಷದ ನಾಯಿಗೆ ಬೇಡಿಕೆ ಇಟ್ಟ ಮಗ - ಮನೆಬಿಟ್ಟ ತಾಯಿ; ಪುತ್ರ ಸಾವಿಗೆ ಶರಣು

ಎರಡು ಲಕ್ಷ ಮೌಲ್ಯದ ನಾಯಿ ಬೇಕೆಂದು ಹಠ ಹಿಡಿದ ಮಗ ಆತ್ಮಹತ್ಯೆಗೆ ಶರಣದಾದ ಘಟನೆ ನಡೆದಿದೆ. ಈ ಘಟನೆ ಹುಬ್ಬಳ್ಳಿಯ ಮಿಷನ್ ಕಾಪೌಂಡ್‌ನಲ್ಲಿ ನಡೆದಿದೆ. ಅಲೆನ್ ವಿನೋದ್ ಭಸ್ಮೆ (24) ಆತಹತ್ಯೆಗೆ ಶರಣಾದ ಯುವಕ.

ಅಲೆನ್ ವಿನೋದ್ ಭಸ್ಮೆ ಎಂಬಾತ ಎರಡು ಲಕ್ಷ ಮೌಲ್ಯದ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಹಠ ಮಾಡಿದ್ದಾನೆ. ಮಗನ ಕಾಟಕ್ಕೆ ಬೇಸತ್ತ ತಾಯಿ ಮನೆ ಬಿಟ್ಟು ಹೋಗಿದ್ದರು.

ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!