ಬಂಟ್ವಾಳ:  ಹೆಲ್ಮೆಟ್   ಧರಿಸಿ 12 ಅಂಗಡಿಗಳಿಗೆ ನುಗ್ಗಿದ ಕಳ್ಳ.!!
ಅಂಗಡಿಗಳಲ್ಲಿ ಸರಣಿ ಕಳ್ಳತನ, ಹೆಲ್ಮೆಟ್ ಧರಿಸಿ ಕೃತ್ಯ

ಬಂಟ್ವಾಳ : ಹೆಲ್ಮೆಟ್  ಧರಿಸಿದ ಕಳ್ಳನೋರ್ವ ಅಂಗಡಿಗಳಿಗೆ ನುಗ್ಗಿ ಕಳವು ಮಾಡಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.

ಬಿ.ಸಿ.ರೋಡಿನ ಕೈಕಂಬದಲ್ಲಿ ಒಟ್ಟು 12 ಅಂಗಡಿಗಳಿಗೆ ಕಳ್ಳನೋರ್ವ ನುಗ್ಗಿ ಜಾಲಾಡಿದ್ದು, ಇದರಲ್ಲಿ ಮೂರು ಅಂಗಡಿಗಳಿ0ದ ಸುಮಾರು 61 ಸಾವಿರ ರೂ ಕಳವು ಮಾಡಿದ್ದಾನೆ.

ಟಿ.ವಿ ರಿಚಾರ್ಜ್ ಅಂಗಡಿಯೊ0ದರಲ್ಲಿ ಇಡಲಾಗಿದ್ದ ಸುಮಾರು 52 ಸಾವಿರ ನಗದು, ಸಾಯಿ ಲೀಲಾ ಹೋಟೆಲ್ ನ 6 ಸಾವಿರ ಹಾಗೂ ಇನ್ನೊಂದು ಅಂಗಡಿಯಿ0ದ 3 ಸಾವಿರ ರೂ ನಗದು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳ್ಳ ಹೊಟೇಲ್, ಸಹಕಾರಿ ಸಂಘಗಳ ಕಚೇರಿ ಸಹಿತ ಹಲವು ಅಂಗಡಿಗಳಿಗೆ ನುಗ್ಗಿ ಜಾಲಾಡಿ ಹೋಗಿದ್ದಾನೆ.  ರಾತ್ರಿ ವೇಳೆ ಭಾರಿ ಮಳೆ ಇದ್ದು, ಕಳ್ಳ ಇದೇ ಸಮಯದಲ್ಲಿ ಕಳವು ಮಾಡಿದ್ದಾನೆ ಎಂದು ಹೇಳಲಾಗಿದೆ. ಬೈಕಿನಲ್ಲಿ ಬಂದ ಕಳ್ಳ ಹೆಲ್ಮೆಟ್  ಧರಿಸಿಯೇ ಅಂಗಡಿಗಳಿಗೆ ನುಗ್ಗಿರುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!