ಲವ್ ಜಿಹಾದ್ ಶಂಕೆ: ಅಟ್ಟಾಡಿಸಿಕೊಂಡು ಯದ್ವಾತದ್ವಾ ಹೊಡೆದ ಯುವಕರು.!
ಬಸ್ ನಿಲ್ದಾಣದಲ್ಲಿ ಯುವತಿಗೆ ಚಾಕಲೇಟ್ ನೀಡುತ್ತಿದ್ದ ಮುನೀರ್, ಸಮೀರ್‌ಗೆ ಅಟ್ಟಾಡಿಸಿಕೊಂಡು ಹೊಡೆದ ಯುವಕರು

ಚಿಕ್ಕಮಗಳೂರು : ಹಿಂದು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಅನ್ಯಕೋಮಿನ ಯುವಕ ಮತ್ತು ಅವನ ಸ್ನೇಹಿತರನ್ನು ಹಿಂದೂ ಯುವಕರು ಅಟ್ಟಾಡಿಸಿ ಯದ್ವಾತದ್ವಾ ಹೊಡೆದ ಘಟನೆ ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮುನೀರ್, ಸಮೀರ್ ಎಂಬವರು ಹಿಂದು ಯುವತಿಯೊಂದಿಗೆ ಒಡನಾಟ ಹೊಂದಿದ್ದು, ಲವ್ ಜಿಹಾದ್ ಶಂಕೆ ವ್ಯಕ್ತವಾಗಿತ್ತು ಎನ್ನಲಾಗಿದೆ. ಮಂಗಳವಾರ ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಹಿಂದೂ ಯುವತಿಯೊಬ್ಬಳಿಗೆ ಚಾಕಲೇಟ್ ನೀಡಿದ್ದನ್ನು ಗಮನಿಸಿದ ನಾಲ್ವರು ಯುವಕರು, ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಸದ್ಯ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಡಿಯೋ ಬಸ್ ನಿಲ್ದಾಣದ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಇನ್ನು ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಲಾಗಿದ್ದು ನಾಲ್ವರು ಹಿಂದು ಸಂಘಟನೆಯೊ0ದರಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇವರನ್ನು ನೈತಿಕ ಪೊಲೀಸ್ ಗಿರಿ ಆರೊಪದಲ್ಲಿ ಬಂಧಿಸಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!