ಬಂಟ್ವಾಳ: ವಂಚನೆ ಆರೋಪ - ಯುವಕನ ಮನೆ ಮುಂದೆ ಧರಣಿ ಕೂತ ಬೆಂಗಳೂರಿನ ಯುವತಿ
ಬಂಟ್ವಾಳ: ವಂಚನೆ ಆರೋಪ - ಯುವಕನ ಮನೆ ಮುಂದೆ ಧರಣಿ ಕೂತ ಬೆಂಗಳೂರಿನ ಯುವತಿ

ಬಂಟ್ವಾಳ: ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬಂದು ಯುವಕನನ್ನು ತನಗೆ ಒಪ್ಪಿಸುವಂತೆ ಪ್ರತಿಭಟನೆಗೆ ಕೂತ ವಿಚಿತ್ರ ಘಟನೆ ಮಂಗಳವಾರ ನಡೆದಿದೆ. ಯವತಿಯನ್ನು ಮನವೊಲಿಸಲು ವಿಫಲರಾದ ವಿಟ್ಲ ಪೊಲೀಸರು ರಾತ್ರಿ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ.

ಉತ್ತರ ಭಾರತದ ಜಲಂದರ್ ಮೂಲದ ಯುವತಿ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ.

ಭಿನ್ನ ಕೋಮಿನ ಜೋಡಿ..!

ಕೆಲವೊಂದು ಮೂಲಗಳ ಪ್ರಕಾರ ಇದೊಂದು ಭಿನ್ನ ಕೋಮಿನ ಪ್ರೀತಿ ಎನ್ನಲಾಗುತ್ತಿದೆ. ಯುವಕ ಪ್ರೀತಿಯ ನಾಟಕವಾಡಿ ಯುವತಿಯಿಂದ ಹಣ ಪಡೆದು ವಂಚಿಸಿದ್ದಾನೆ. ಕೊಟ್ಟ ಹಣ ಕೇಳಿದಾಗ ಯುವಕ ಹಣ ಕೊಡಲು ನಿರಾಕರಿಸಿದ್ದಾನೆ. 

ಬೆಂಗಳೂರಿನ ಲಾಡ್ಜ್ ನಲ್ಲಿ ಕೆಲಸಕ್ಕಿದ್ದ ಅಡ್ಯನಡ್ಕ ಭಜನಾ ಮಂದಿರ ಸಮೀಪದ ಮುಸ್ಲಿಂ. ಯುವಕ ಹಲವು ಸಮಯಗಳಿಂದ ಬೆಂಗಳೂರಿನ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಲಕ್ಷ ಹಣ ತೆಗೆದುಕೊಂಡು ಕೈಕೊಟ್ಟಿದ್ದನೆನ್ನಲಾಗಿದೆ.

ಮಂಗಳವಾರ ಸಾಯಂಕಾಲ ಅಡ್ಯನಡ್ಕದ ಮನೆ ಬಳಿಗೆ ಬಂದ ಸಂತ್ರಸ್ತ ಯುವತಿಗೆ ಪ್ರೀತಿ ಮಾಡುವುದಾಗಿ ಹೇಳಿದ ಯುವಕ ಸಿಕ್ಕಿಲ್ಲ. ಇದರಿಂದ ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದು ಮನೆಯ ಮುಂದೆ ಕೂತಿದ್ದಾಳೆ. ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಿಟ್ಲ ಠಾಣೆಯಿಂದ ಆಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!