ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಮೈದಾನದಲ್ಲಿ ಗಾಂಜಾ ಮಾರಾಟ - ಇಬ್ಬರ ಬಂಧನ

ಮಂಗಳೂರು: ನಗರ ಹೊರವಲಯದ ಬೋಂದೆಲ್ ಸಾರ್ವಜನಿಕ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರದ ಹಿಮ ನೀಶ್ (26) ಮತ್ತು ಕೋಟೆಕಾರ್ ಪವನ್‌ರಾಜ್ ಪಿ. (28) ಎಂದು ಗುರುತಿಸಲಾಗಿದೆ.

ಆರೋಪಿಗಳು ಸುಮಾರು 19 ಗ್ರಾಂ ತೂಕದ 57,000 ರೂ. ಮೌಲ್ಯದ ಮೆಥಪಟೈನ್ ಎಂಬ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉತ್ತರ ಉಪ ವಿಭಾಗದ ಆಂಟಿ ಡ್ರಗ್ಸ್ ಸ್ಕ್ವಾಡ್ ದಾಳಿ ನಡೆಸಿ ಬಂಧಿಸಿದಲ್ಲದೆ ಮೊಬೈಲ್, ಬೈಕ್ ಸಹಿತ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!