ಯಾವುದೇ ಅನುಮತಿ ಇಲ್ಲದೆ ಬೆಳಿಗ್ಗಿನವರೆಗೆ ಕಾರ್ಯಾಚರಿಸುವ ಮಂಗಳೂರಿನ ಪಬ್ ಗಳು
ಮಂಗಳೂರಿನಲ್ಲಿ ಪಬ್ ಗಳ ಹಾವಳಿ

ಡ್ರಗ್ಸ್ ನಶೆಯಲ್ಲಿ ತೇಲುವ ಯುವ ಜನತೆ, ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು ಈ ಪಬ್ ಗಳಲ್ಲಿ ಸರ್ವೇ ಸಾಮಾನ್ಯ..!

ಮಂಗಳೂರು : 'ನಮ್ಮ ಕುಡ್ಲ' ದೇಶದಲ್ಲಿರುವ ಸುಂದರ ಸ್ಮಾರ್ಟ್ ಸಿಟಿಗಳ ಪೈಕಿ  ಮಂಗಳೂರು ಕೂಡ ಒಂದು. ಮಂಗಳೂರು ಒಂದು ಸುಂದರ ನಗರವಾಗಿರಲಿ ಎಂಬ ಆಶಯದೊಂದಿಗೆ ಇಂತಹ ಮಂಗಳೂರಿನಲ್ಲಿ ನಡೆಯುವ ಹಲವು ಅಕ್ರಮಗಳ ಬಗ್ಗೆ ನಮ್ಮ ಮಾಧ್ಯಮ ಸರಾಗವಾಗಿ ವರದಿ ಬಿತ್ತರಿಸಿ ಅದಕ್ಕೆಲ್ಲಾ ಕಡಿವಾಣ ಹಾಕಲು ಪ್ರಯತ್ನಪಟ್ಟಿತ್ತು. ಹಾಗೆ ಮಂಗಳೂರಿನಲ್ಲಿ ಈಗ ಡ್ರಗ್ಸ್ ಎಂಬ ಪಿಶಾಚಿ ಯುವ ಜನತೆಯ ಹಾದಿ ತಪ್ಪಿಸುತ್ತಿದೆ ಎಂದರೆ ತಪ್ಪಾಗಲಾರದು. ಪೊಲೀಸ್ ಇಲಾಖೆಯ "ಆಂಟಿ ಡ್ರಗ್ ಸ್ಕ್ವಾಡ್" ಎಂಬ ಘಟಕ ರಚಿಸಿ ಬಿಗು ಕಾರ್ಯಾಚರಣೆ ನಡೆಸಿ ಹಲವೆಡೆ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿದೆ. 

ಆದರೆ ಈಗಿನ ದಿನಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಾಚರಿಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆಯಾಗಿದೆ. ನಮ್ಮ ಮಂಗಳೂರಿನಲ್ಲಿ ಇರುವ ತುಳುನಾಡಿನ ಸಂಪ್ರದಾಯಕ್ಕೆ ಧಕ್ಕೆ ತರುವಂತೆ ಈ ಪಬ್ ಗಳು ಇಂದಿನ ದಿನಗಳಲ್ಲಿ ಕಾರ್ಯಾಚರಿಸುತ್ತಿವೆ. ಈ ಪಬ್ ಗಳು ಮಂಗಳೂರಿನಲ್ಲಿ ಈಗಿನ ದಿನಗಳಲ್ಲಿ ರಾತ್ರಿ 7 ಗಂಟೆಯಿ0ದ ಬೆಳಿಗ್ಗೆ 3 ರಿಂದ 4 ಗಂಟೆಯ ವರೆಗೂ ಜೋರಾಗಿ ಡಿ.ಜೆ. ಸೌಂಡ್ಸ್ ಇಟ್ಟುಕೊಂಡು ತೆರೆದಿರುತ್ತಿದೆ. ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು ಮತ್ತಿನಲ್ಲಿ ಡ್ಯಾನ್ಸ್ ಮಾಡುವುದು, ನಶೆಯಲ್ಲಿಯೇ ರಸ್ತೆಗಳಲ್ಲಿ ತೇಲಾಡಿಕೊಂಡು ಹೋಗುವುದು ರಾತ್ರಿ ಸಂಚರಿಸುವವರಿಗೆ ಮುಜುಗರ ಉಂಟುಮಾಡಿದೆ. ಇದೆಲ್ಲ ಸದ್ಯ ಮಂಗಳೂರು ನಗರದಲ್ಲಿ ರಾತ್ರಿ ಹೊತ್ತು ಸರ್ವೇ ಸಾಮಾನ್ಯವಾಗಿದೆ. ನಗರದ ಸ್ವಾಥ್ಯವನ್ನು ಹಾಳುಗೆಡುವ ಪಬ್ ಗಳು ನಮ್ಮ ಗಮನಕ್ಕೆ ಬಂದಿದ್ದು. ಆ ಪಬ್ ಗಳು ಯಾವುದೆಲ್ಲ ಎಂಬ ಲಿಸ್ಟ್ ನಾವು ನಿಮ್ಮ ಮುಂದೆ ಇಡುತ್ತೇವೆ ನೋಡಿ.

ಮೊದಲನೆಯದಾಗಿ OYNX (ಒಯ್ನಿಕ್ಸ್), ಮಂಗಳೂರು ಬಲ್ಲಾಳ್ ಭಾಗ್ ಟಿ.ಎಂ.ಏ. ಪೈ ಹತ್ತಿರದ HDFCಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಕಟ್ಟಡದ ಮೇಲಿನ ಮಹಡಿಯಲ್ಲಿ ಇರುವುದೇ ಈ OYNX ಎಂಬ ಆಧುನಿಕ ಶೈಲಿಯ ಪಬ್. ಹತ್ತಿರದಲ್ಲೇ ಪ್ರತಿಷ್ಠಿತ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ, ಇಲ್ಲಿ ಹೊರ ರಾಜ್ಯದಿಂದ ಕಲಿಯಲು ಬಂದಿರುವ ವಿಧ್ಯಾರ್ಥಿಗಳ ದಂಡು ಕಾಣ ಸಿಗುವುದೇ ಹೆಚ್ಚು.. ಶನಿವಾರ ಆದಿತ್ಯವಾರ ಬಂದರ0ತೂ ಇಲ್ಲಿ ಜನಸಾಗರವೇ ಸೇರುತ್ತದೆ. ಬೆಳಿಗ್ಗೆ 4 ಗಂಟೆ ವರೆಗೂ ಇದು ತೆರೆದಿರುತ್ತದೆ. ಶಾಲಾ ಕಾಲೇಜು ಹತ್ತಿರದ 100 ಮೀಟರ್ ಅಂತರದಲ್ಲಿ ಯಾವುದೇ ಬಾರ್, ಪಬ್ ಗಳು ಕಾರ್ಯಚರಿಸುವಂತಿಲ್ಲ. ಆದರೆ, ಇವೆಲ್ಲಾ ಕಾನೂನು ಈ OYNX ಪಬ್ ಗೆ ಅನ್ವಯವಾಗುವುದಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ಕೆನರಾ ಕಾಲೇಜು, ಎಸ್.ಡಿ.ಎಂ. ಕಾಲೇಜು, ಶ್ರೀ ದೇವಿ ಕಾಲೇಜು, ಇನ್ನೂ ಹಲವಾರು ಕಾಲೇಜು ಗಳು ಇದರ ಹತ್ತಿರವೇ ಇದೆ.

"ಟಾಪ್ ಹೌಸ್" ಪಬ್ - TOP HOUSE PUB

ಎರಡನೆಯದಾಗಿ ಸಿಟಿ ಸೆಂಟರ್ ಸಮೀಪದ ಕೆ.ಎಸ್.ಆರ್. ರೋಡ್ ನ ಪ್ರತಿಷ್ಠಿತ ಪೂಂಜಾ ಇಂಟರ್ ನ್ಯಾಷನಲ್ ಹೋಟೆಲ್ ನ 10 ನೇ ಅಂತಸ್ತಿನಲ್ಲಿರುವ "ಟಾಪ್ ಹೌಸ್" ಪಬ್. ಇಲ್ಲಿ ಕೂಡ ಅರೆಬರೆ ಬಟ್ಟೆ ಹಾಕಿಕೊಂಡು ರಾತ್ರಿ ಇಡೀ ಡ್ರಗ್ಸ್, ಮದ್ಯಪಾನದಲ್ಲಿ ಯುವಜನತೆ ತೊಡಗಿಕೊಂಡು ಡಿ.ಜೆ. ಹಾಡಿಗೆ ನಶೆಯಲ್ಲಿ ನರ್ತಿಸುವುದು ಇಲ್ಲಿ ಕಾಣಬಹುದು. ಇಂದು ರಾತ್ರಿ ಕೂಡ "ಇನ್ವಷನ್ 2.0" ಎಂಬ ಪಾರ್ಟಿ ಇವಂಟ್ ಆಯೋಜಿಸಿ  ಅಂಕಿಟ್ರಿಕ್ಸ್ ಎಂಬ ಹೊರ ರಾಜ್ಯದ ಡಿ.ಜೆ. ಪ್ಲೇಯರ್ ನನ್ನು ಆಮಂತ್ರಿಸಿ ಬಹುದೊಡ್ಡ ಪಾರ್ಟಿ ನಡೆಯಲಿದೆ ಎಂಬುವುದು ನಮ್ಮ ಮಾಧ್ಯಮದ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಇಂದೇ ಕ್ರಮ ಕೈಗೊಳ್ಳಬೇಕಾಗಿದೆ. 

ಈ ಬಗ್ಗೆ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಕೂಡ ಇಂದು ತನ್ನ ಫೇಸ್ ಬುಕ್ ನಲ್ಲಿ ಈ ಪಬ್ ಗಳ ಅಕ್ರಮದ ಬಗ್ಗೆ ವರದಿ ಮಾಡಿದ್ದರು. ಅದರಲ್ಲಿ ಶರ್ಲಾಕ್, ಬಾಲಿವುಡ್ ಅಡ್ಡ, ಟಾಪ್ ಹೌಸ್ ಬಗ್ಗೆ ತಿಳಿಸಿದ್ದರು. ಅವರ ಗಮನಕ್ಕೆ OYNX (ಓಯಿನಿಕ್ಸ್) ಪಬ್ ಒಂದು ಬಂದಿಲ್ಲ. ಅದರ ಬಗ್ಗೆ ಕೂಡ ಅವರು ಧ್ವನಿ ಎತ್ತಬೇಕಾಗಿದೆ ಎಂಬುವುದು ನಮ್ಮ ಅಭಿಪ್ರಾಯ.

ಶರ್ಲಾಕ್ ಪಬ್ - SHERLOCK PUB ಬಿಗ್ ಬಾಲಿವುಡ್ ಅಡ್ಡ - BIG BOLLYWOOD ADDA

ಇನ್ನೂ ಮುಂದುವರಿದು ಪಬ್ ಗಳ ಲಿಸ್ಟ್ ಪೈಕಿ, ಜ್ಯೋತಿ ಸರ್ಕಲ್ ಸಮೀಪದ ಹೆಸರಾಂತ ಗೋಲ್ಡ್ ಫಿಂಚ್ ಹೋಟೆಲ್ ನ ಮೇಲಿನ ಅಂತಸ್ತಿನ ಶರ್ಲಾಕ್ ಪಬ್, ಬಲ್ಮಠ ಸಮೀಪದ ಪ್ರೆಸ್ಟೀಜ್ ಹೋಟೇಲ್ ನ ಕೆಳ ಅಂತಸ್ತಿನಲ್ಲಿರುವ "ಬಿಗ್ ಬಾಲಿವುಡ್ ಅಡ್ಡ". ಈ ಪಬ್ ಗಳು ಕೂಡ ತಡರಾತ್ರಿ 3 ಗಂಟೆಯವರೆಗೂ ತೆರೆದಿರುತ್ತದೆ. 

ಮತ್ತೊಂದು ಇದರಲ್ಲಿನ ಆಶ್ಚರ್ಯದ ವಿಚಾರವೇನೆಂದರೆ, ಈ ಎಲ್ಲಾ ಪಬ್ ಗಳ ಪೈಕಿ ಪ್ರತಿಯೊಂದಕ್ಕೂ ಇರುವುದು ಕೇವಲ ಬಾರ್ ಲೈಸೆನ್ಸ್ ಮಾತ್ರ. ಯಾವೊಂದು ಪಬ್ ಗೆ ಕೂಡ ಡಿ.ಜೆ. ಪಾರ್ಟಿ ನಡೆಸಲು ಅಥವಾ ತಡರಾತ್ರಿವರೆಗೆ ಪಾರ್ಟಿ ನಡೆಸಲು ಪರವಾನಿಗೆಯೂ ಇಲ್ಲ, ಅನುಮತಿಯೂ ಇಲ್ಲ. ಇದರ ಬಗ್ಗೆ ಆದಷ್ಟು ಬೇಗ ಮಾನ್ಯ ಪೋಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಕ್ರಮ ಕೈಗೊಂಡು ಇಂತಹ ಅಕ್ರಮಗಳಿಗೆ ಬೀಗ ಜಡಿಯಬೇಕಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!