ಮಂಗಳೂರು: ಮಂಜಲ್ ಪಾದೆಯ ಅಕ್ರಮಕ್ಕೆ ಭೂ ವಿಜ್ಞಾನ ಇಲಾಖೆಯಿಂದಲೇ ಅಭಯ ಹಸ್ತ.!??
ನದಿ ಒಡಲು ಬಗೆದು ಬಗೆದು, ಸೇತುವೆ ಕುಸಿದು ಬೀಳುವ ಸಾಧ್ಯತೆ

ಮಂಗಳೂರು : ಇದು ಮಂಜಲ್ ಪಾದೆಯಲ್ಲಿ ನಡೆಯುತ್ತಿರುವ ಒಂದು ದೊಡ್ಡ ಮಟ್ಟದ ಅಕ್ರಮ ಮರಳುಗಾರಿಕೆ. ಇದರ ಬಗ್ಗೆ ಹಲವು ವರದಿಗಳು, ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದರು ಈ ಅಕ್ರಮ ತಡೆಯಲು ಸಾಧ್ಯವಾಗಿಲ್ಲ. 

ಮಂಗಳೂರು ಬೋಂದೆಲ್ ಸಮೀಪದ ಮಂಜಲ್ ಪಾದೆ ಎಂಬಲ್ಲಿ ನಡೆಯುತ್ತಿರುವ ಬಹು ದೊಡ್ಡ ಮಟ್ಟದ ಪ್ರಭಾವಿ ವ್ಯಕ್ತಿಗಳು ನಡೆಸುವ ಮರಳುಗಾರಿಕೆ. ಸಚಿನ್, ವಿಕ್ಟರ್, ಸುಧಾಕರ್, ಜುಬೆದ್ದುಲ್ಲಾ, ಆಶಿತ್, ಸಂದೇಶ್, ರೋಹಿತ್ ,ವೆಂಕಟ್ ಎಂಬವರು ನಡೆಸುವ ಈ ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ.


ಇಲ್ಲಿ ಹರಿದು ಹೋಗುವ ಫಲ್ಗುಣಿ ನದಿಯನ್ನು ನುಂಗಿ ನೀರುಕುಡಿಯಲು ಹೊರಟಿರುವ ಈ ಪಾಪಿಗಳಿಂದ ಇಲ್ಲಿ ದೊಡ್ಡ ಅನಾಹುತ ನಡೆಯುವ ಸಂಭವ ಎದುರಾಗಿದೆ. ನದಿ ಒಡಲು ಬಗೆದು ಬಗೆದು ಸೇತುವೆಗಳು ಬೀಳುವ ಭೀತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಗಮನಿಸಿ ಹಾಗೆಯೇ ಹೋಗಿದ್ದಾರೆ. ಇದೇ ಸಂದರ್ಭ ಅಲ್ಲಿ 15 ಕ್ಕಿಂದ ಅಧಿಕ ದೋಣಿಗಳು ಇತ್ತು ಎಂಬುದು ಅಲ್ಲಿದ್ದ ಸ್ಥಳೀಯರು ನಮ್ಮ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಗಾದ್ರೆ ಇದರ ಹಿಂದೆ ಇರುವ ಪ್ರಭಾವಿ ವ್ಯಕ್ತಿ ಯಾರೂ ಎನ್ನುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ...?? ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಲು ಹಿಂದೇಟು ಹಾಕುವಂತೆ ಇವರ ನಡುವೆ ನಡೆದಿರುವ ಒಪ್ಪಂದವಾದ್ರು ಏನು.?? ಇದು ನಿಜಕ್ಕೂ ಯಕ್ಷ ಪ್ರಶ್ನೆ.?


ಮರಳು ಮಾಫಿಯಾದ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಬೊಂದೆಲ್ ಸಮೀಪದ ಮಂಜಲ್ ಪಾದೆ ಎನ್ನುವ ಪ್ರದೇಶ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ. ಇಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ 20ಕ್ಕೂ ಅಧಿಕ ನಾಡ ದೋಣಿಗಳನ್ನು ಬಳಸಿ ಮರುಳೆತ್ತಿ ದೊಡ್ಡ ಅಕ್ರಮ ದಂಧೆ ಪ್ರಾರಂಭ ಮಾಡಿಕೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!