ಮಂಗಳೂರು: ಪ್ರತ್ಯೇಕ ಪ್ರಕರಣ - ಇಬ್ಬರು ಆಸಾಮಿಗಳ ಬಂಧನ.!!
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್‌ ಆರೋಪಿಗಳ ಬಂಧನ

ಮಂಗಳೂರು : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು 62 ನೇ ತೋಕೂರಿನ ಜೋಕಟ್ಟೆಯ ನಿವಾಸಿ, ಇಮ್ರಾನ್ (31) ಹಾಗೂ ಉತ್ತರ ಪ್ರದೇಶದ ಗೋರಕಪುರ ಜಿಲ್ಲೆಯ ನಿವಾಸಿ ಧರ್ಮವೀರ (30) ಎಂದು ಗುರುತಿಸಲಾಗಿದೆ. 

ಇವರು ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.

ಪ್ರಕರಣ 1 : ಬಜಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ದರೋಡೆಗೆ ಸಂಚು ರೂಪಿಸಿದ ಕೇಸಿನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಡಿದ್ದ ಆರೋಪಿ 62 ನೇ ತೋಕೂರಿನ ಜೋಕಟ್ಟೆಯ ನಿವಾಸಿ, ಇಮ್ರಾನ್. ಈತನ ವಿರುದ್ದ ಮಂಗಳೂರು ನಗರ, ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಗೋಕಳ್ಳತನ ಸಂಬ0ಧಿಸಿದ ಕೇಸುಗಳು ದಾಖಲಾಗಿತ್ತು. ಸದ್ಯ ಈತನನ್ನು ಪೊಲೀಸರು ಹಡೆಮುರಿ ಕಟ್ಟಿದ್ದಾರೆ. 

ಪ್ರಕರಣ 2 : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ರಸ್ತೆ ಅಪಘಾತ ನಡೆಸಿ ಗಾಯಾಳು ಮೃತಪಡಲು ಕಾರಣಕರ್ತನಾದ ಅಪರಾಧಿಕ ಮಾನವ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ರಾಜ್ಯದ ಗೋರಕಪುರ ಜಿಲ್ಲೆಯ ಹಮತಿ ತಾಲೂಕಿನ ದೋಬಾಲಿ ಹೌಸ್‌ನ ಧರ್ಮವೀರ ಎಂಬತನನ್ನು ಮಂಗಳವಾರದ0ದು ಬಂಧಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!