ದಪ್ಪ ಆಗುವ ಔಷಧಿ ಎಂದು ಹೇಳಿ ಹೆಂಡತಿಗೆ ವಿಷ ಉಣಿಸಿದ ಗಂಡ
ಪ್ರೀತಿಸಿ ಮದುವೆಯಾದವಳಿಗೆ ವಿಷಕೊಟ್ಟು ಕೊಂದ ಪಾಪಿ ಪತಿ

ಗಂಡನೇ ಹೆಂಡತಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ ಆರೋಪ ಬಳ್ಳಾರಿ ನಗರದ ಕೌಲಬಜಾರ್‌ನಲ್ಲಿ ಕೇಳಿಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಬಾಳಲ್ಲಿ ಬಿರುಗಾಳಿ ಎಬ್ಬಿದ್ದು ಹೆಂಡತಿ ದಪ್ಪ ಆಗಲಿ ಎಂದು ಔಷಧೀಯ ನೆಪದಲ್ಲಿ ಗಂಡ ಸಾಧಿಕ ಸಾಬ್ (25) ವಿಷ ಬೆರಸಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನಲೆ ಮೂರು ದಿನಗಳ ಕಾಲ ವಿಮ್ಸ್ ಆಸ್ಪತ್ರೆಯಲ್ಲಿ ಮೃತ ಫರ್ಜಾನಾಭಿ (22) ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ. 

ಮೃತ ಮಹಿಳೆ ಶವದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾರ್ವಜನಿಕರೆ ಹಣ ಹೊಂದಿಸಿ ಈ ಪ್ರೀತಿಗೆ ಬೆಂಬಲಿಸಿ ಮದುವೆ ಮಾಡಿದ್ದರು. ಮದುವೆಯಾಗಿ ಐದು ವರ್ಷ ಸಂಸಾರ ಮಾಡಿದ್ದ ಇವರಿಗೆ ಎರಡು ಹೆಣ್ಣು ಮಕ್ಕಳನ್ನು ಕೂಡ ಇದ್ದರು. ಇಂತಹ ಸುಖ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿದೆ, ಎನ್ನುವಷ್ಟರಲ್ಲಿ ಪತಿ, ಕಿರುಕುಳ ನೀಡಲು ಪ್ರಾರಂಭಿಸಿದ್ದ.

ಪದೇ ಪದೇ ಪರ್ಜಾನಾಭಿಗೆ ಗಂಡ ಸಾಧಿಕ್ ಕಿರುಕುಳ ನೀಡುತ್ತಿದ್ದನಂತೆ. ಪರ್ಜಾನಿಭಿಗೆ ತಂದೆ ಇಲ್ಲ, ಬಡತನದ ಕುಟುಂಬದಿಂದ ಬಂದ ಹೆಣ್ಣು ಮಗಳು, ಬಡತನ ಇರುವ ಹಿನ್ನೆಲೆ ಗಂಡನಿಗೆ ಹೆದರಿ ಜೀವನ ನಡೆಸುತ್ತಿದ್ದಳು. ಆದರೂ ಕೂಡ ಕರಗದ ಗಂಡನ ಮನಸ್ಸು, ಪ್ರೀತಿಸಿದ ಹೆಂಡತಿಯನ್ನ ಕೊಂದನಾ? ಎಂಬ ಪ್ರಶ್ನೆ ಮೂಡಿದೆ. ಇನ್ನು ಮೃತಳ ಪೋಷಕರು, ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!