ಉಡುಪಿ: ಇಸ್ಲಾಂ ಎಜುಕೇಶನ್‌ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನಾಲ್ಕು ವಿದ್ಯಾರ್ಥಿಗಳು ನಾಪತ್ತೆ
ಉಡುಪಿ: ಇಸ್ಲಾಂ ಎಜುಕೇಶನ್‌ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನಾಲ್ಕು ವಿದ್ಯಾರ್ಥಿಗಳು ನಾಪತ್ತೆ

ಉಡುಪಿ: ಶಿರ್ವದ ಪೈಜಲ್‌ ಇಸ್ಲಾಂ ಎಜುಕೇಶನ್‌ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನಾಲ್ಕು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಪರ್ವೇಜ್‌ ಸಲೀಂ ಎಂಬುವವರು ಕೊಟ್ಟ ದೂರಿನ ಪ್ರಕಾರ ಪೈಜಲ್‌ ಇಸ್ಲಾಂ ಎಜುಕೇಶನ್‌ ಟ್ರಸ್ಟ್‌ ಶಿರ್ವ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಮೇ 14 ರಂದು ಮಧ್ಯಾಹ್ನ 2:30 ಗಂಟೆಯಿಂದ ಮಧ್ಯಾಹ್ನ 3:30 ಗಂಟೆಯ ನಡುವಿನ ಅವಧಿಯಲ್ಲಿ ನಾಪತ್ತೆಯಾಗಿದ್ದಾರೆ.

ಬಿಹಾರ ರಾಜ್ಯದ ವಿದ್ಯಾರ್ಥಿಗಳಾದ ತಬಾರಕ್‌, ಜಮ್‌ ಶೇಡ್‌,  ತಂಜೀರ್‌ ಆಲ್‌ಮ್‌, ಶಾಹಿಲ್ ಇವರುಗಳು ಸಂಸ್ಥೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!