ಕಾಸರಗೋಡು: ಕೋ - ಆಪರೇಟಿವ್ ಸೊಸೈಟಿಗೆ 4.76 ಕೋಟಿ ರೂ. ವಂಚನೆ: ಸಂಸ್ಥೆಯ ಕಾರ್ಯದರ್ಶಿಯಿಂದಲೇ ಕನ್ನ
ಕಾಸರಗೋಡು: ಕೋ - ಆಪರೇಟಿವ್ ಸೊಸೈಟಿಗೆ 4.76 ಕೋಟಿ ರೂ. ವಂಚನೆ: ಸಂಸ್ಥೆಯ ಕಾರ್ಯದರ್ಶಿಯಿಂದಲೇ ಕನ್ನ

ಸಿಪಿಎಂ ನಿಯಂತ್ರಣದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ - ಆಪರೇಟಿವ್ ಸೊಸೈಟಿ 4.76 ಕೋಟಿ ರೂ. ವಂಚನೆ ನಡೆಸಿದ ಪ್ರಕರಣದಲ್ಲಿ ಕಾರ್ಯದರ್ಶಿ, ಸಿಪಿಎಂ ಲೋಕಲ್‌ ಸಮಿತಿ ಸದಸ್ಯ ಕೆ. ರತೀಶ್ ಗಾಗಿ ಆದೂರು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು ಆತನ ಸುಳಿವು ಪತ್ತೆಯಾಗಿಲ್ಲ.

ಆರೋಪಿ ರತೀಶ್ ಹಣವನ್ನು ವಯನಾಡ್ ಹಾಗೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿದು ಬಂದಿದೆ. ವಯನಾಡ್ ಹಾಗೂ ಬೆಂಗಳೂರಿನಲ್ಲಿ ಭೂಮಿ ಖರೀದಿಸಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತಾದ ದಾಖಲೆಗಳು ಪೊಲೀಸರಿಗೆ ಲಭಿಸಿದೆ ಎಂದು ವರದಿಯಾಗಿದೆ. ಕೋಟ್ಯಾಂತರ ರೂ. ವಂಚಿಸಿದರೂ ರತೀಶ್ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗದಿದ್ದರಿಂದ ಆತನ ಮೇಲೆ ಸಂಶಯ ಉದ್ಭವಿಸಿರಲಿಲ್ಲ ಎನ್ನಲಾಗಿದೆ.

ಘಟನೆಯ ವಿವರ :

ಸದಸ್ಯರ ಗಮನಕ್ಕೆ ತರದೆ ಸುಮಾರು 4. 76 ಕೋಟಿ ರೂ . ಗಳ ಸಾಲ ತೆಗೆದು ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ರತೀಶ್ ಪರಾರಿಯಾಗಿದ್ದರು. ಈ ಬಗ್ಗೆ ಸೊಸೈಟಿ ಅಧ್ಯಕ್ಷ ಸೂಫಿ ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ರತೀಶ್ ರಜೆ ಅರ್ಜಿ ನೀಡದೇ, ಸಂಸ್ಥೆಗೂ ಬಾರದೆ , ಯಾರ ಮೊಬೈಲ್ ಸಂಪರ್ಕಕ್ಕೂ ಸಿಗದೇ ಪರಾರಿಯಾಗಿದ್ದರು. ಇದರಿಂದ ಸಂಶಯಗೊಂಡು ಸಹಾಯಕ ನೋಂದಣಾಧಿಕಾರಿ ರವರಲ್ಲಿ ತಪಾಸಣೆಗೆ ಸೂಚನೆ ನೀಡಿದ್ದು, ಈ ವೇಳೆತಪಾಸಣೆ ವೇಳೆ ಭಾರೀ ವಂಚನೆ ಬೆಳಕಿಗೆ ಬಂದಿತ್ತು. ಬ್ಯಾಂಕ್ ನಲ್ಲಿ ಹಲವಾರು ಮಂದಿ ಚಿನ್ನಾಭರಣ ವನ್ನು ಅಡವಿಟ್ಟ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ .


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!