ವಿದ್ಯಾರ್ಥಿನಿಯರಿಗೂ ಡೀಪ್​ ಫೇಕ್​ ಕಾಟ - ಅಶ್ಲೀಲವಾಗಿ ಫೋಟೋ ಎಡಿಟ್ ಮಾಡಿ ಹರಿಬಿಟ್ಟ ಕಿಡಿಗೇಡಿ.!
ಡೀಪ್​ ಫೇಕ್​ - ಶಾಲಾ ವಿದ್ಯಾರ್ಥಿನಿಯರೇ ಟಾರ್ಗೆಟ್

ತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮುಖಾಂತರ ಪ್ರಸಿದ್ಧ ಚಿತ್ರನಟ ಮತ್ತು ನಟಿಯರ ಭಾವಚಿತ್ರ ಮತ್ತು ವಿಡಿಯೋಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಹರಿಬಿಡಲಾಗಿತ್ತು. ಈ ಡೀಪ್​ ಫೇಕ್​ನಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಡೀಪ್​ ಫೇಕ್​ ಬೆಂಗಳೂರಿಗೂ ಕಾಲಿಟ್ಟಿದ್ದು, ಶಾಲಾ ವಿದ್ಯಾರ್ಥಿನಿಯರೇ ಟಾರ್ಗೆಟ್​ ಆಗಿದ್ದಾರೆ.

ಈ ಬೆನ್ನಲ್ಲೇ ಇದೀಗ ಬೆಂಗಳೂರಿನ ಪ್ರತಿಷ್ಠಿತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯ ಭಾವಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಮುಖಾಂತರ ಅಶ್ಲೀಲವಾಗಿ ಎಡಿಟ್​ ಮಾಡಿ ಎಲ್ಲಡೆ ಹರಿಬಿಡಲಾಗಿದೆ. ಮೇ 24 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮನಲ್ಲಿ ಗ್ರೂಪ್ ರಚಿಸಿಕೊಂಡಿದ್ದಾರೆ. ಬಳಿಕ ಈ ಗ್ರೂಪ್​ನಲ್ಲಿ ಅನಾಮದೆಯ ವ್ಯಕ್ತಿ ವಿದ್ಯಾರ್ಥಿನಿಯರ ಮಾರ್ಫಿಂಗ್ ಭಾವಚಿತ್ರಗಳನ್ನು ಶೇರ್​ ಮಾಡುತ್ತಾನೆ. ಈ ವಿಚಾರ ತಿಳಿದು ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಪೋಷಕರು ಈಗಾಗಲೇ ಸೈಬರ್ ಸೆಲ್​ಗೆ ದೂರು ನೀಡಿದ್ದಾರೆ.

ದುಷ್ಕರ್ಮಿಗಳು ಇತ್ತೀಚಿಗೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಭಾವಚಿತ್ರವನ್ನು ಡೀಪ್​ ಫೇಕ್​ ಮೂಲಕ ಅಶ್ಲೀಲವಾಗಿ ವಿಡಿಯೋ ಎಡಿಟ್​ ಮಾಡಿದ್ದರು. ಈ ಪ್ರಕರಣ ನಂತರ ಇದೇ ರೀತಿ ನಟಿ ಕತ್ರಿನಾ ಕೈಫ್​ ಅವರ ಭಾವಚಿತ್ರ ಉಪಯೋಗಿಸಿ ಅಶ್ಲೀಲವಾಗಿ ಎಡಿಟ್​ ಮಾಡಲಾಗಿತ್ತು.

ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್​ ಫೇಕ್ ​ ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್​ಮೇಲ್ ​​ ಮಾಡಿರುವ ಘಟನೆ ಕಳೆದ ವರ್ಷ ನವೆಂಬರ್​ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿತ್ತು. ಫೋಟೋ ಎಡಿಟ್​ ಮಾಡಿ ಬ್ಯ್ಲಾಕ್​ಮೇಲ್​ ಮಾಡಿದ್ದ ಆರೋಪಿ ಮಂಥನ್ ಪಾಟೀಲ್​ (22)​ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದದ್ದರು. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್​ ಪಾಟೀಲ್​​ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದ್ದನು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!