ಸುರತ್ಕಲ್: MRPL ಕಾರ್ಮಿಕ 120 ಅಡಿ ಮೇಲಿಂದ ಬಿದ್ದು ಸಾವು.!
ಎಂ.ಆರ್.ಪಿ.ಎಲ್ - ವ್ಯಕ್ತಿಯೋರ್ವ 120 ಅಡಿ ಮೇಲಿಂದ ಬಿದ್ದು ಮೃತ್ಯು

ಸುರತ್ಕಲ್: ಎಂ.ಆರ್.ಪಿ.ಎಲ್ ನಲ್ಲಿ ನೀರಿನ ಲೀಕೇಜ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೋರ್ವ 120 ಅಡಿ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಜಾರ್ಖಾಂಡ್ ನ ರಾಂಚಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದ ಮಂಗಳ್ ಓರನ್ (38) ಎಂದು ಗುರುತಿಸಲಾಗಿದೆ.

ಎಂ.ಆರ್.ಪಿ.ಎಲ್ ನಲ್ಲಿ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡೋ ಕ್ಯಾಕರ್ ನಲ್ಲಿ ನೀರಿನ ವೇಗ ಪರಿಶೀಲಿಸಲು ಮಂಗಳ ಓರನ್ ತೆರಳಿದ್ದರು. ಆಗ ಅಲ್ಲಿ ನೀರಿನ ಸೋರುವಿಕೆ ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಂದರ್ಭ ಸೋರುವಿಕೆಯಲ್ಲಿ ನೀರಿನ ಹರಿವು ಒಮ್ಮೆಲೇ ಹೆಚ್ಚಾಗಿ ಮಂಗಳ್ ಓರನ್ 120 ಅಡಿ ಮೇಲಿಂದ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅಲ್ಲಿನ ಸಿಬ್ಬಂದಿ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!