ಬಿಗ್ ಬಾಸ್ ಮನೆಯಿಂದ ಅಕ್ಕ ತಮ್ಮ ಹೊರಕ್ಕೆ..! ಎಂಟ್ರಿ ಕೊಟ್ಟ ಕಿಚ್ಚ ಸುದೀಪ..? ಪುಷ್ಟೀಕರಿಸಿದ ವೀಡಿಯೋಗಳು..!
ಬಿಗ್ ಬಾಸ್ ಮನೆಯಿಂದ ಅಕ್ಕ ತಮ್ಮ ಹೊರಕ್ಕೆ..! ಎಂಟ್ರಿ ಕೊಟ್ಟ ಕಿಚ್ಚ ಸುದೀಪ..? ಪುಷ್ಟೀಕರಿಸಿದ ವೀಡಿಯೋಗಳು..!

ಕನ್ನಡದ ಬಿಗ್‌ಬಾಸ್ ಸೀಸನ್ 10 ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತದೆ. ಈ ವಾರದಲ್ಲಿ ಬಿಗ್‌ಬಾಸ್ ಮನೆ ಮಂದಿಗೆ ಟಾಸ್ಕ್ವೊಂದನ್ನು ನೀಡಿದ್ದರು. ಆ ಟಾಸ್ಕ್ ಹೆಸರು ರಾಕ್ಷಸರು v/s ಗಂಧರ್ವರು. ಇದೇ ಟಾಸ್ಕ್ ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆ ಜಗಳಕ್ಕೆ ಕಾರಣವಾಗಿದೆ. ಇದೀಗ ಆ ಟಾಸ್ಕ್ನಲ್ಲಿ ಎಲ್ಲವೂ ಪರ್ಸನಲ್ ಅಟ್ಯಾಕ್ ಆಗಿ ತಿರುಗಿ ಬಿಟ್ಟಿದೆ.

ಒಂದು ಚೇರ್ ಆಫ್ ಥ್ರೋನ್ಸ್ ಎಂಬ ಟಾಸ್ಕ್ ನಲ್ಲಿ ಅತೀವ ಗಾಯಗೊಂಡು ಬಿಗ್‌ಬಾಸ್ ಸ್ಪರ್ಧಿ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. 

ಪುಷ್ಟೀಕರಿಸಿದ ವೀಡಿಯೋಗಳು..!

ಇಂದು ಬೆಳಗ್ಗೆ ಕಲರ್ಸ್ ಕನ್ನಡ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಆದ ಪ್ರೊಮೋ ವೀಡಿಯೊದಲ್ಲಿ ಕೂಡ ಸಂಗೀತಾ, ಪ್ರತಾಪ್ ಕಾಣಿಸಿಕೊಂಡಿಲ್ಲ. ಇದು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸ್ನೇಹಿತ್ ಆಟದಿಂದ ಯಾರನ್ನು ಹೊರಗಡೆ ಇರಿಸುತ್ತೀರಿ ಎಂಬ ಹೈಲೆಟ್ ವಿಡಿಯೋ ಆಗಿತ್ತು. ಬಹುಶಃ ಇದರಲ್ಲಿ ಅವರು ಕಾಣಿಸಿಲ್ಲ ಎಂದು ಸುಮ್ಮನಿದ್ದ ಪ್ರೇಕ್ಷಕರಿಗೆ ಮಧ್ಯಾಹ್ನ ನಂತರದ ಅಪ್ಲೋಡ್ ಆದ ಪ್ರೊಮೊದಲ್ಲಿ ಸಂಗೀತ ಹಾಗೂ ಡ್ರೋನ್ ಕಾಣೆದೇ ಇರೋದು ಅಚ್ಚರಿ ಮೂಡಿಸಿದೆ. ಸದಾ ಕಾರ್ತಿಕ್ ಹಿಂದೆನೇ ಇರೋ ಸಂಗೀತಾ ಇತ್ತೀಚಿಗೆ ಈ ವಿಡಿಯೋಗಳಲ್ಲಿ ಕಂಡಿಲ್ಲ. ಅದೂ ಸಹ ಕಾರ್ತಿಕ್‌ಗೆ ಕಳಪೆ ಪಟ್ಟ ಕೊಟ್ಟಾಗ ಜೊತೆಗೇ ಇರಬೇಕಾದ ಗೆಳತಿ ಸಂಗೀತಾ ಇಲ್ಲದ್ದು ಪ್ರೇಕ್ಷಕರಲ್ಲಿ ಅನುಮಾನ ಹುಟ್ಟಿಸಿದೆ. 

ಬೆಂಕಿ ತನಿಷಾ ಯಾಕೆ ಸುಮ್ಮನಾದ್ರು?

ಗಂಧರ್ವರಾಗಿ ಆಟ ಆಡಿದ್ದ ಸಂಗೀತಾ ಮತ್ತು ಬಳಗಕ್ಕೆ ವಿನಯ್ ಟೀಮ್ ಸಖತ್ ಕೀಟಲೆ ಕೊಟ್ಟಿದೆ. ಇದ್ರ ಬಗ್ಗೆ ಯಾರೊಬ್ಬ ಇತರ ಸ್ಪರ್ಧಿಯೂ ಬಾಯಿ ಬಿಚ್ಚದೇ ಇರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಬೆಂಕಿ ತನಿಷಾ ಯಾವುದೇ ತಪ್ಪು ಕಂಡು ಬಂದರೂ ಅದನ್ನು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ. ಆದ್ರೆ ಇದರ ಬಗ್ಗೆ ಯಾಕೆ ಮಾತಾಡಿಲ್ಲ ಅನ್ನೋದು ಕೂಡ ಜನರ ಪ್ರಶ್ನೆ. 

ಅಕ್ಕ ತಮ್ಮನಿಗೆ ಬೆಡ್ ರೆಸ್ಟ್

ಸಂಗೀತಾ ಹಾಗೂ ಪ್ರತಾಪ್ ಈಗ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳುತ್ತಿದ್ದು ಕಣ್ಣಿಗೆ ಬ್ಯಾಡೇಜ್ ಸುತ್ತಿದ್ದಾರಂತೆ. ಇನ್ನೂ ಇಬ್ಬರು ಸತತ ಎರಡು ದಿನಗಳಿಂದ ರೆಸ್ಟ್ ನಲ್ಲಿ ಇದ್ದಿದ್ದು ವಿಕೇಂಡ್ ಎಪಿಸೋಡ್‌ಗೆ ಮನೆಗೆ ವಾಪಸ್ ಮರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ವಾರ ಬಿಗ್‌ಬಾಸ್ ಕೊಟ್ಟ ರಾಕ್ಷಸರು ಗಂಧರ್ವರು ಟಾಸ್ಕ್ ಎಲ್ಲವು ಅತಿರೇಕಕ್ಕೆ ಹೋಗಿ ಮನೆಯ ವಾತಾವರಣವೇ ಬದಲಾಗಿ ಹೋಗಿದೆ. ಈ ಎಲ್ಲಾ ಬೆಳವಣಿಗೆಯನ್ನ ನೋಡಿ ನಾಳೆ ವಿಕೇಂಡ್ ಶೂಟ್ ಗೆ ಬರಬೇಕಿದ್ದ ಕಿಚ್ಚ ಸುದೀಪ ಅವರು ಇವತ್ತೇ, ಅಂದ್ರೆ ಶುಕ್ರವಾರ ಸಂಜೆ ಬಿಗ್ ಬಾಸ್ ಸೆಟ್ ವಿಸಿಟ್ ಮಾಡಲಿದ್ದಾರೆ ಎಂಬ ಎಕ್ಸ್ಕ್ಲ್ಯೂಸಿವ್ ಅಪ್ಡೇಟ್ ಒಂದು ಹೊರ ಬಿದ್ದಿದೆ. 

ಈ ಎಲ್ಲಾ ಬೆಳವಣಿಗೆ ನೋಡಿ ಬಿಗ್ ಮನೆಯ ವಾತಾವರಣ ಹೇಗಿದೆ, ಸ್ಪರ್ಧಿಗಳ ಮನಸ್ಥಿತಿ ಹೇಗಿದೆ, ಸೆಟ್‌ನ ವಾತಾವರಣ ಹೇಗಿದೆ ಇದೆಲ್ಲವನ್ನು ಕಲೆ ಹಾಕಲು ಇವತ್ತು ಕಿಚ್ಚ ಸುದೀಪ ಅವರು ಬಿಗ್ ಮನೆಯ ಸೆಟ್‌ಗೆ ಧಾವಿಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!