ಕಪ್ಪು ಕನ್ನಡಕ ಧರಿಸಿ ಬಿಗ್ ಬಾಸ್ ಮನೆಗೆ ಬಂದ ಅಕ್ಕ ತಮ್ಮ..! ಆನೆ - ಚಮಚ ಗ್ಯಾಂಗ್‌ನ ಮನೆ ಬಿಟ್ಟು ಓಡಿಸಿ ಎಂದ ನೆಟ್ಟಿಗರು..!
ಕಪ್ಪು ಕನ್ನಡಕ ಧರಿಸಿ ಬಿಗ್ ಬಾಸ್ ಮನೆಗೆ ಬಂದ ಅಕ್ಕ ತಮ್ಮ..!
ಆನೆ - ಚಮಚ ಗ್ಯಾಂಗ್‌ನ ಮನೆ ಬಿಟ್ಟು ಓಡಿಸಿ ಎಂದ ನೆಟ್ಟಿಗರು..!

ಕನ್ನಡದ ಬಿಗ್ ಬಾಸ್ ಸೀಝನ್ 10 ಸದಾ ಕಿರಿಕ್ ನಿಂದಲೇ ಸುದ್ದಿಯಾಗುತ್ತಿದೆ. ವಿನಯ್ ಗ್ಯಾಂಗ್ ನಡೆದುಕೊಳ್ಳುವ ಹಾಗೂ ನಡೆಸಿಕೊಳ್ಳುವ ರೀತಿ ವೀಕ್ಷಕರನ್ನು ಸದಾ ಕೋಪಕ್ಕೆ ತಳ್ಳುವಂತೆ ಮಾಡುತ್ತದೆ. 

ಈ ವಾರ ಬಿಗ್ ಬಾಸ್ ಮನೆಯಲ್ಲಿ ಗಂಧರ್ವ ಹಾಗೂ ರಾಕ್ಷಸರು ಎಂಬ ಕಾನ್ಸೆಪ್ಟ್ ಇತ್ತು. ಈ ವಾರವೂ ಜಗಳ ಹಾಗೆಯೇ ಮುಂದುವರಿದಿದೆ. 

ಪದೇ ಪದೇ ಜಗಳ ಆಡುವ ವಿನಯ್ ಮತ್ತು ಟೀಮ್..!

ವಿನಯ್ ಹಾಗೂ ಆತನ ಟೀಮ್ ಸದಾ ರಗಡ್ ಆಟ, ಕೋಪದಿಂದಲೇ ಆಡುತ್ತಾರೆ. ಸದಾ ಒಂದಲ್ಲ ಒಂದು ವಿವಾದವನ್ನು ಮೈಗೆ ಸುತ್ತಿಕೊಳ್ಳುವ ವಿನಯ್ ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ ಎಷ್ಟೇ ಕ್ಲಾಸ್ ತೆಗೆದುಕೊಂಡರೂ ಮತ್ತೆ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನುವಂತೆ ವಿನಯ್ ಟೀಮ್ ವರಸೆ ಬದಲಾಯಿಸುತ್ತಿಲ್ಲ ಅನ್ನೋದು ವೀಕ್ಷರಿಗೆ ಅರ್ಥವಾಗಿದೆ. 

ಕೆಮಿಕಲ್ ನೀರು ಎರಚಿದ ವರ್ತೂರ್ ತಂಡ..!

ಗ0ಧರ್ವರಾಗಿ ಆಟ ಆಡಿದ್ದ ಸಂಗೀತ ತಂಡದ ಸದಸ್ಯರನ್ನು ಚಯರ್‌ನಿಂದ ಎದ್ದೇಳಿಸಬೇಕೆಂಬ ಟಾಸ್ಕ್ನಲ್ಲಿ ಹಳ್ಳಿಕಾರ್ ವರ್ತೂರ್ ಸಂತೋಷ್ ಅವರ ತಂಡ ವಿಚಿತ್ರವಾಗಿ ಕೀಟಲೆ ಕೊಟ್ಟಿದೆ. ಕೆಮಿಕಲ್ ಮಿಶ್ರಿತ ನೀರನ್ನು ವೇಗವಾಗಿ ಸಂಗೀತಾ ಹಾಗೂ ಪ್ರತಾಪ್ ಮೇಲೆ ಎರಚಲಾಗಿದೆ. 

ಆಸ್ಪತ್ರೆಗೆ ದಾಖಲಾದ ಅಕ್ಕ ತಮ್ಮ..!

ಕೆಮಿಕಲ್ ಮಿಶ್ರತ ನೀರಿನ ಚೆಲ್ಲಾಟದಿಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದರು. ಕಳೆದ ಎಪಿಸೋಡ್‌ಗಳಲ್ಲಿ ಡ್ರೋನ್ ಹಾಗೂ ಚಾರ್ಲಿ ಚೆಲುವೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಯಾರೊಬ್ಬ ಇತರ ಸ್ಪರ್ಧಿಯೂ ಮಾತಾಡಿಲ್ಲ. ಆದ್ರೆ ವಾರಾಂತ್ಯಕ್ಕೆ ಅಕ್ಕ ತಮ್ಮ ಎಂಟ್ರಿ ಕೊಟ್ಟಿದ್ದಾರೆ.

ಕಪ್ಪು ಕನ್ನಡಕ ಧರಿಸಿ ಬಂದ್ರು..!

ಹೌದು. ಆಸ್ಪತ್ರಗೆ ಸೇರಿದ್ದ ಸಂಗೀತಾ ಹಾಗೂ ಪ್ರತಾಪ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಪ್ಪು ಕನ್ನಡಕ ಧರಿಸಿ ಬಂದಿದ್ದಾರೆ. ಈ ವೇಳೆ ಮನೆ ಮಂದಿ ಭಾವುಕರಾಗಿದ್ದಾರೆ. ಬೆಂಕಿ ತನಿಷಾ, ಲವರ್ ಬಾಯ್ ಕಾರ್ತಿಕ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ..! - ಸೊಕ್ಕಡಗಿಸುತ್ತಾರಾ ಪೈಲ್ವಾನ್?

ಈ ವಾರ ಬಹಳ ಕೂತೂಹಲ ಹುಟ್ಟಿಸಿದೆ. ಡಬಲ್ ಎಲಿಮಿನೇಷನ್ ಇದೆ ಎಂದೂ ಕೂಡ ಹೇಳಲಾಗುತ್ತಿದೆ. ಮತ್ತೊಂದೆಡೆ ಕ್ರೂರವಾಗಿ ನಡೆಸಿಕೊಂಡ ವಿನಯ್ ಚಮಚಾ ಗ್ಯಾಂಗ್‌ಗೆ ಕಿಚ್ಚ ಚಳಿ ಬಿಡಿಸಬೇಕೆಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಇನ್ನು ಮೈಕಲ್, ವಿನಯ್, ನಮ್ರತಾ ಅವರ ನಡವಳಿಕೆ ಜನರಲ್ಲಿ ಬೇಸರ ತರಿಸಿದೆ. ಸಂಗೀತಾ ಶೃಂಗೇರಿ ಅವರಿಗೆ ಕಣ್ಣಿನ ತೊಂದರೆ ಮೊದಲೇ ಇತ್ತೆಂದು ಹೇಳಲಾಗುತ್ತಿದೆ. ಪ್ರತಾಪ್ ಹಾಗೂ ಸಂಗೀತಾ ಕನ್ನಡಕ ಧರಿಸಿಯೇ, ಮನೆಗೆ ಬಂದಿದ್ದು ಬಿಗ್ ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟಂತಾಗಿದೆ. ಈ ವಾರ ಡಬಲ್ ಎಲಿಮೇನಷನ್ ಇದ್ರೆ ವಿನಯ್, ನಮ್ರತಾ ಗೌಡ ಅವರನ್ನೇ ಮನೆಗೆ ಕಳುಹಿಸಿ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಲ್ಲದೆ ಇದರಲ್ಲಿ ಏನೋ ತಂತ್ರ ಇದೆ. ಅಥವಾ ಪಾಠ ಕಲಿಸಲು ಬಿಗ್ ಬಾಸ್ ಮಾಡಿರುವ ತಂತ್ರಗಾರಿಕೆ ಏನಾದರೂ ಇದೆಯಾ ಎಂಬುವುದು ರಾತ್ರಿಯ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ತಿಳಿದುಬರಬೇಕಾಗಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!