ಕಾಪು: ಮಾರಿಪೂಜೆಯಲ್ಲಿ  ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದು ಜಾಗರಣ ವೇದಿಕೆಯಿಂದ ಮನವಿ
ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧ

ಕಾಪು: ದಿನಾಂಕ 21/03/23 ಮತ್ತು 22/03/23 ರಂದು ನಡೆಯುವ ಸುಗ್ಗಿ ಮಾರಿಪೂಜೆಗೆ ನಡೆಯುವ ಎಲಂ ಪ್ರಕ್ರಿಯೆಯಲ್ಲಿ ಹಿಂದುಯೇತರರಿಗೆ ಅಂಗಡಿಗಳನ್ನು ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಹಾಗೂ ಹಿಂದು ಜನಜಾಗೃತಿಯ ವತಿಯಯಿಂದ ಮಾರಿಗುಡಿಯ ಸಮಿತಿಯ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಉಪಸ್ಥಿತಿಯಿದ್ದರು.

ಮನವಿಯಲ್ಲಿ ಉಲ್ಲೇಖಿಸಲಾದ ವಿಷಯ:

"ಹಿಂದೂ ಸಮಾಜ ನೀಡುವ ವ್ಯಾಪಾರದಿಂದಲೇ ಮುಸಲ್ಮಾನರು ಆರ್ಥಿಕವಾಗಿ ಸಬಲರಾಗಿ, ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆ ಮನೆಗೆ ನುಗ್ಗಿ ತಲವಾರು ತೋರಿಸಿ ಗೋ ಕಳ್ಳತನ, ಗೋ ಹತ್ಯೆ, ಲ್ಯಾಂಡ್ ಜಿಹಾದ್, ಲವ್ ಜಿಹಾದ್ ಇತ್ಯಾದಿ ಹಿಂದೂ ವಿರೋಧಿ ಕೃತ್ಯಗಳನ್ನು ಎಸಗುತ್ತಾ ಬರುತಿದ್ದಾರೆ. ಅಷ್ಟೇ ಅಲ್ಲದೆ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಿ.ಎಫ್.ಐ ಹಾಗೂ ಅದರ ಅಂಗ ಸಂಸ್ಥೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ಮಾಡಿದಾಗ, ಅವರ ಮೇಲೆಯೇ ಪ್ರತಿದಾಳಿಗೆ ಪ್ರಯತ್ನಿಸಿದ್ದು ಹಾಗೂ ದೇಶಾದ್ಯಂತ ಮತ್ತೆ ಗಲಭೆ ನಡೆಸಲು ಸಂಚು ಹೂಡಿದ ವಿಚಾರ ಎಲ್ಲರಿಗೂ ತಿಳಿದಿದೆ. ಈ ರೀತಿ ನಿರಂತರವಾಗಿ ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಎಸಗುತ್ತಾ ಬರುತ್ತಿರುವ ಮುಸಲ್ಮಾನರಿಗೆ ನಾವು ನಮ್ಮ ಕ್ಷೇತ್ರದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದರೆ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ನಾವೇ ಬೆಂಬಲಿಸಿದಂತಾಗುತ್ತದೆ. ಕಳೆದ ಬಾರಿಯ ಮಾರಿಪೂಜೆಯಲ್ಲಿ ಕೂಡ ಹಿಂದೂ ಸಮಾಜದ ಒಗ್ಗಟ್ಟಿನಿಂದಾಗಿ ಕ್ಷೇತ್ರದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶವಾಯಿತು ಹಾಗೂ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯಿತು. ಆದುದರಿಂದ ಈ ಬಾರಿಯೂ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಸುಗ್ಗಿ ಮಾರಿಪೂಜೆಯಲ್ಲಿ ಯಾವುದೇ ಕಾರಣಕ್ಕೂ ಅನ್ಯಮತೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಅಗ್ರಹಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!