ಕಿನ್ನಿಗೊಳಿ: ಬೈಕ್'ಗೆ ಸ್ಕೂಟರ್ ಅಡ್ಡಗಟ್ಟಿ ವ್ಯಕ್ತಿಗೆ ಚೂರಿ ಇರಿತ..!
ಕಿನ್ನಿಗೊಳಿ: ಬೈಕ್'ಗೆ ಸ್ಕೂಟರ್ ಅಡ್ಡಗಟ್ಟಿ ವ್ಯಕ್ತಿಗೆ ಚೂರಿ ಇರಿತ..!
ವ್ಯಕ್ತಿಗೆ ಚೂರಿ ಇರಿತ..!

ಕಿನ್ನಿಗೊಳಿ ಸಮೀಪದ ಅತ್ತೂರು ತಿಮ್ಮಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬರು ಬೈಕ್ ಗೆ ಸ್ಕೂಟರ್ ಅಡ್ಡ ಇಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಯಿಂದ ತೀವ್ರ ಗಾಯಗೊಂಡವರನ್ನು ಅಬ್ದುಲ್ ಬಶೀರ್ ಎಂದು ಗುರುತಿಸಲಾಗಿದೆ.

ಗಾಯಾಳು ಅಬ್ದುಲ್ ಬಶೀರ್ ತಮ್ಮ ನಾಲ್ಕು ವರ್ಷದ ಮಗುವಿನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅತ್ತೂರು ತಿಮ್ಮಕಟ್ಟೆ ವಾಟರ್ ಟ್ಯಾಂಕ್ ಬಳಿ ಆರೋಪಿ ಮೊಹಮ್ಮದ್ ಮುಸ್ತಾಫ ಎಂಬಾತನು ತನ್ನ ಸ್ಕೂಟರನ್ನು ಅಡ್ಡ ಇಟ್ಟು ಹರಿತವಾದ ಚಾಕುವನ್ನು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಮುಂದಾದಾಗ ಅಬ್ದುಲ್ ಬಶೀರ್ ಆತಂಕಗೊಂಡು ತನ್ನ ಮಗುವಿನ ಜೊತೆಗೆ ಸ್ಥಳದಿಂದ ಹೋಗಲು ಯತ್ನಿಸಿದಾಗ ಆರೋಪಿ ಹಿಂಬಾಲಿಸಿ ಬಶೀರ್ ಬೆನ್ನಿಗೆ ಚೂರಿ ಹಾಕಿದ್ದಾನೆ.

ಘಟನೆಯಿಂದ ಗಂಭೀರ ಗಾಯಗೊಂಡ ಬಶೀರ್ ರವರನ್ನು ಕೂಡಲೇ ಸ್ಥಳದಲ್ಲಿದ್ದ ಇಸ್ಮಾಯಿಲ್, ರಫಿಕ್ ಮತ್ತಿತರರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮೊಹಮ್ಮದ್ ಮುಸ್ತಫಾ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣದಾಗಲಾಗಿದೆ.

Comments

https://newsdaksha.online/assets/images/user-avatar-s.jpg

0 comment

Write the first comment for this!