ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೋರ್ ವೆಲ್ ಲಾರಿ – ಯುವಕ ಸ್ಥಳದಲ್ಲೇ ಸಾವು
ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೋರ್ ವೆಲ್ ಲಾರಿ – ಯುವಕ ಸ್ಥಳದಲ್ಲೇ ಸಾವು
ಅಪಘಾತ ಯುವಕ ಸ್ಪಾಟ್ ಡೆತ್

ವಿಟ್ಲ : ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿ ಹಾಗೂ ದ್ವಿಚಕ್ರವಾಹನದ ನಡುವೆ ಅಪಫಾತ ಸಂಭವಿಸಿ, ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ವಿಟ್ಲ ಪೇಟೆ ಹೊರವಲಯದ ಹೆದ್ದಾರಿಯ ಕಾಶಿಮಠದಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಆಲಂಗಾರು ಬ್ರಾಣಪಾದೆ ನಿವಾಸಿ ರಂಜಿತ್ ಎಂದು ಗುರುತಿಸಲಾಗಿದ್ದ , ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ರಂಜಿತ್ ತನ್ನ ದ್ವಿಚಕ್ರ ವಾಹನದಲ್ಲಿ ವಿಟ್ಲ ಕಡೆಯಿಂದ ಉಕ್ಕುಡದತ್ತ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೋರ್ ವೆಲ್ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿಗೆ ದ್ವಿಚಕ್ರ ಸಿಲುಕಿ ಹಾಕಿಕೊಂಡಿದ್ದು, ಕೆಲವು ಮೀಟರ್ ದೂರಕ್ಕೆ ಸಹಸವಾರನನ್ನು ಲಾರಿ ಎಳೆದೊಯ್ದಿದೆ. ಇದರಿಂದ ಸಹಸವಾರನ ತಲೆ ಸಂಪೂರ್ಣ ಛಿದ್ರವಾಗಿದೆ.

ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

https://newsdaksha.online/assets/images/user-avatar-s.jpg

0 comment

Write the first comment for this!