ಮಂಗಳೂರಿನ ಪ್ರಥಮ "Street Food Fiesta" ಗೆ ಹರಿದು ಬಂದ ಜನಸಾಗರ….!!
ಅತಿ ದೊಡ್ಡ ಆಹಾರ ಉತ್ಸವ

ಮಂಗಳೂರಿನಲ್ಲಿ ವಿಭಿನ್ನ ಕಲ್ಪನೆಯಲ್ಲಿ ಪ್ರಾರಂಭವಾಗಿರುವ ಪ್ರಥಮ ರಸ್ತೆ ಬದಿ ಆಹಾರ ಉತ್ಸವ ಆರಂಭಗೊಂಡಿದ್ದು, ಮೊದಲ ದಿನವೇ ಭರ್ಜರಿ ಆಹಾರ ಉತ್ಸವಕ್ಕೆ ಜನಸಾಗರ ಹರಿದು ಬಂದಿದೆ.

ಮಂಗಳೂರಿನ ಪ್ರಥಮ ಹಾಗೂ ಅತೀ ದೊಡ್ಡ ಆಹಾರ ಉತ್ಸವ ಮಾರ್ಚ್ 26ರವರೆಗೆ ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮುಖಾಂತರ ಮಣ್ಣಗುಡ್ಡೆ ಗುರ್ಜಿ ವೃತ್ತದವರೆಗೆ ನಡೆಯಲಿದೆ.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಫುಡ್‌ಫೆಸ್ಟಿವಲ್‌ನ ಮೊದಲ ದಿನವೇ ಜನಸಾಗರ ಬರಿದು ಬಂದಿದ್ದು, ಇಂದು ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸಂಜೆಯ ವೇಳೆ ಫುಡ್‌ಸ್ಟಾಲ್‌ನಲ್ಲಿ ಸಸ್ಯಹಾರಿ-ಮಾಂಸಹಾರಿ ಸೇರಿದಂತೆ ವಿವಿಧ ತಿಂಡಿ-ತಿನಿಸುಗಳನ್ನು ಸವಿದರು.

ಸದ್ಯ 140 ಕ್ಕೂ ಹೆಚ್ಚು ಸ್ಟಾಲ್‌ಗಳು ಇದ್ದು, ಬಂಗಾಳಿ, ಗುಜರಾತಿ ಸೇರಿದಂತೆ ಉತ್ತರ ಭಾರತದ ಶೈಲಿಯ ಖಾದ್ಯಗಳು ಬಾಯಿಯಲ್ಲಿ ನೀರೂರಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!