
ಮುಲ್ಕಿ: ಅಕ್ರಮ ಗೋವಿನ ಅಡ್ಡೆ - ಆರೋಪಿ ಅರೆಸ್ಟ್.!
ಅಂಗಾರಗುಡ್ಡೆ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪ್ಪಾಡಿ ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಅಕ್ರಮ ಗೋವಿನ ಅಡ್ಡೆ ಪತ್ತೆ ಹಚ್ಚಿದ ಹಿಂದೂ ಸಂಘಟನೆಯ ಯುವಕರು ಸುಮಾರು 19 ಗೋವುಗಳನ್ನು ರಕ್ಷಣೆ ಮಾಡಿದ್ದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಸ್ಥಳೀಯ ನಿವಾಸಿ ಸಂಶುದ್ದೀನ್ (57) ಎಂದು ಗುರುತಿಸಲಾಗಿದೆ.
ಆರೋಪಿ ಸಂಶುದ್ದೀನ್ ಸುಮಾರು 19 ಗೋವುಗಳನ್ನು ಸಾಕುವ ರೀತಿಯಲ್ಲಿ ಮೇಯಲು ಬಿಟ್ಟಿದ್ದು ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಪತ್ತೆ ಹಚ್ಚಿ ಪರಿಶೀಲಿಸಿದಾಗ ಆರೋಪಿಯು ಸಂಶಯಾತ್ಮಕ ರೀತಿಯಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ಕೂಡಲೇ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Comments
0 comment