ಉಡುಪಿ: ಮನೆ-ನಿವೇಶನ ಖರೀದಿಸಿ ವಂಚನೆಗೆ ಒಳಗಾದ ದೊಡ್ಡ ಸಮಸ್ಯೆ.! ಸಂತ್ರಸ್ತರಿಂದ ಚುನಾವಣಾ ಬಹಿಷ್ಕಾರ.!!
ಉಡುಪಿ: ಮನೆ-ನಿವೇಶನ ಖರೀದಿಸಿ ವಂಚನೆಗೆ ಒಳಗಾದ ದೊಡ್ಡ ಸಮಸ್ಯೆ.! ಸಂತ್ರಸ್ತರಿಂದ ಚುನಾವಣಾ ಬಹಿಷ್ಕಾರ.!!
ಮಾಲಕತ್ವವಿದ್ದರೂ ಕಾನೂನಿನ ತೊಡಕುಗಳಿಗೆ ಸಿಲುಕಿದ ಜನರು: ಸಂತ್ರಸ್ತರಿಂದ ಚುನಾವಣಾ ಬಹಿಷ್ಕಾರ.!!

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 90ರ ದಶಕದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ, ಲಕ್ಷಾಂತರ ರೂ. ನೀಡಿ ಭೂಪರಿವರ್ತಿತ ವಸತಿ ನಿವೇಶನಗಳನ್ನು ಖರೀದಿಸಿದ್ದು, ಅದರಲ್ಲಿ ಈಗ ಮನೆಕಟ್ಟಲು ಪ್ರಾಧಿಕಾರವು ಕಾನೂನಿನ ಅಡೆತಡೆಗಳನ್ನೂ ಎದುರಿಸುತ್ತಿದ್ದು. ಯಾರಿಂದಲೂ ಪರಿಹಾರ ದೊರಕದ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.

ಬಹಳಷ್ಟು ಜನ ಹಲವಾರು ಕನಸುಗಳನ್ನು ಕಟ್ಟಿಕೊಂಡು ಈ ನಿವೇಶನವನ್ನು ಖರೀದಿಸಿದ್ದಾರೆ. ಯಾರು ಅಕ್ರಮವಾಗಿ ಜಾಗ ಪಡೆದುಕೊಂಡಿಲ್ಲ. ಭೂ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ದೊರಕಿಸುವಂತೆ ಯಾರ ಬಳಿ ಹೋದರು , ಹೋರಾಟ ನಡೆಸಿದರು ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಯವುದೇ ರೀತಿಯ ನ್ಯಾಯ ಒದಗಿಲ್ಲ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಅನಧಿಕೃತ ಬಡಾವಣೆ ಮತ್ತು ಏಕ ನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರ ನಿಯೋಗವು ಕಳೆದ ೧೫-೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಯನ್ನು ಪರಿಹರಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಸತತ ಹೋರಾಟ ನಡೆಸಿದರು ಸಾಧ್ಯವಾಗಿಲ್ಲ.

ಸಂತ್ರಸ್ತರು ನ್ಯಾಯಕ್ಕಾಗಿ ಹಲವಾರು ಪ್ರತಿಭಟನೆ, ಜಾಥಾಗಳನ್ನು ನಡೆಸಿದ್ದರು. ನಲ್ವತ್ತಕ್ಕೂ ಅಧಿಕ ಮಂದಿ ಸಚಿವರು, ಅಟಾರ್ನಿ ಜನರಲ್, ನ್ಯಾಯಾಧೀಶರು ಮೊದಲಾದವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು ಯಾವುದೂ ಫಲ ನೀಡಿಲ್ಲ.

ಉಡುಪಿ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ 1990 ಮತ್ತು 2000 ದಶಕದಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಖರೀದಿಸಿ, ಭೂಪರಿವರ್ತನೆ ಮಾಡಿ, ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದರು. ಈವರೆಲ್ಲರೂ ಆ ಸಮಯದಲ್ಲಿ ಅವರಿಂದ ನೇರವಾಗಿ ಅಥವಾ ಅವರಿಂದ ಖರೀದಿಸಿದವರಿಂದ ಖರೀದಿಸಿದವರು. ಆನಂತರವೇ ಸಮಸ್ಯೆ ಬಗ್ಗೆ ಅರಿವಾಗಿದ್ದು ಎನ್ನಲಾಗಿದೆ.

ಹಲವು ರಾಜಕೀಯ ನಾಯಕರು ತಕ್ಷಣ ಪರಿಹಾರ ತಂದುಕೊಡುವುದಾಗಿ ವಾಗ್ದಾನ ಮಾಡಿದ್ದರು. ಮೂರು ತಿಂಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಕಂದಾಯ ಸಚಿವರು ಆಶ್ವಾಸನೆ ನೀಡಿದ್ದರು. ಆದರೆ ಸಂತ್ರಸ್ತರ ಪಾಲಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

 

Comments

https://newsdaksha.online/assets/images/user-avatar-s.jpg

0 comment

Write the first comment for this!