ಮಂಗಳೂರಲ್ಲಿ ಬಿಗಡಾಯಿಸಿದ ತ್ಯಾಜ್ಯ ವಿಲೇವಾರಿ ಸಮಸ್ಯೆ: ಪಾಲಿಕೆ ಮುಂದೆ ಕಸ ಇಟ್ಟು ಏಕಾಂಗಿ ಪ್ರತಿಭಟನೆ
ಮಂಗಳೂರಲ್ಲಿ ಬಿಗಡಾಯಿಸಿದ ತ್ಯಾಜ್ಯ ವಿಲೇವಾರಿ ಸಮಸ್ಯೆ: ಪಾಲಿಕೆ ಮುಂದೆ ಕಸ ಇಟ್ಟು ಏಕಾಂಗಿ ಪ್ರತಿಭಟನೆ
ತ್ಯಾಜ್ಯ ವಿಲೇವಾರಿ ಸಮಸ್ಯೆ: ಪಾಲಿಕೆ ಮುಂದೆ ಕಸ ಇಟ್ಟು ಏಕಾಂಗಿ ಪ್ರತಿಭಟನೆ

ಮಂಗಳೂರು: ಮಂಗಳೂರಿನಲ್ಲಿ ಮಹಾನಗರಪಾಲಿಕೆಯ ಹೊರಗುತ್ತಿಗೆ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ನಗರದಲ್ಲಿ ಕಸ ವಿಲೇವಾರಿಗೆ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಪಾಲಿಕೆ ವಿರುದ್ದ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದವರು ನೇರ ನೇಮಕಾತಿ/ ನೇರ ಪಾವತಿಗೆ ಆಗ್ರಹಿಸಿ ಕರೆ ಕೊಟ್ಟ ಮುಷ್ಕರ ಶುಕ್ರವಾರಕ್ಕೆ 12ನೇ ದಿನಕ್ಕೆ ಕಾಲಿಟ್ಟಂತಾಗಿದೆ. ಮುಷ್ಕರದ ತೀವ್ರತೆಯಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗಿಂತ ಹೆಚ್ಚಾಗಿ ಒಳಚರಂಡಿ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ದಾರಿ ಇಲ್ಲದೇ ಮಹಾ ನಗರ ಪಾಲಿಕೆ ಆಡಳಿತ ವರ್ಗ ಕಂಗಾಲಾಗಿ ಹೋಗಿದೆ.

ಏತನ್ಮಧ್ಯೆ ಮಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಜತೆಗೆ ಒಳಚರಂಡಿ ವ್ಯವಸ್ಥೆ ಕುರಿತು ಸಾರ್ವಜನಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ, ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಫುಡ್‌ ಫೆಸ್ಟಿವಲ್‌ ಆಯೋಜಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಾಗರಿಕರೊಬ್ಬರು ಮಹಾ ನಗರ ಪಾಲಿಕೆ ಮುಂದೆ ತಮ್ಮ ಮನೆಯಿಂದ ತಂದಿದ್ದ ಒಣ ತ್ಯಾಜ್ಯ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ನಿವೃತ್ತ ಪತ್ರಕರ್ತ ಶ್ರೀನಿವಾಸ್ ನಂದಗೋಪಾಲ್ ಪ್ರತಿಭಟನೆ ನಡೆಸಿದವರು.

 ಈ ಮಧ್ಯೆ ಕಸವಿಲೇವಾರಿಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿದ್ದು,. ನಾವು ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದರೂ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.

Comments

https://newsdaksha.online/assets/images/user-avatar-s.jpg

0 comment

Write the first comment for this!