“ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ)” ಇದರ ಚುನಾವಣಾ ಮತ್ತು ಉದ್ಘಾಟನಾ ಸಮಾರಂಭ
“ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ)” ಇದರ ಚುನಾವಣಾ ಮತ್ತು ಉದ್ಘಾಟನಾ ಸಮಾರಂಭ
ALL COLLEGE STUDENT POWER (R.)

“ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ)” ಇದರ ಚುನಾವಣಾ ಮತ್ತು ಉದ್ಘಾಟನಾ ಸಮಾರಂಭವು ಮಾರ್ಚ್ 25 ರಂದು ಸ್ತ್ರೀ ತುಳಜಾ ಭವಾನಿ ಮರಾಟಿ ಸಮುದಾಯ ಭವನ, ಕುಂಜಿಬೆಟ್ಟು ಇಲ್ಲಿ ನಡೆಯಲಿದೆ.

ಸಾಂದೀಪನಿ ಸಾಧನ ಆಶ್ರಮ, ಕೇಮಾರು ಮಠದ ಸ್ವಾಮೀಜಿ ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟನೆ ಮತ್ತು ಆಶೀರ್ವಚನ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ (ರಿ) ಇದರ ಸಂಸ್ಥಾಪಕ ಶಿವಕುಮಾರ್ ಕರ್ಚೆ ವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌, ಉಡುಪಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ , ಬಾಳಿಗಾ ಆಸ್ಪತ್ರೆ, ಉಡುಪಿ ಇಲ್ಲಿನ ಮಾನಸಿಕ ತಜ್ಞರು ಡಾ. ಪಿ.ವಿ ಭಂಡಾರಿ, ಉಡುಪಿ ಯುವ ಕಾಂಗ್ರೆಸ್‌ ಜಿಲ್ಲಾದ್ಯಕ್ಷ ವಿಶ್ವಾಸ್ ಅಮೀನ್, ರೂಪೇಶ್ ಕಲ್ಮಾಡಿ ನಿರ್ದೇಶಕರು ಪ್ರೈಮ್ ಟಿ ವಿ, ಗೀತಾಂಜಲಿ ಸುವರ್ಣ, ನಿರ್ದೇಶಕರು ಮೀನುಗಾರಿಕ ನಿಗಮ ಕರ್ನಾಟಕ, ವೀಣಾ ಎಸ್ ಶೆಟ್ಟಿ ಜಿಲ್ಲಾಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ, ವಸಂತ್ ಹೊಸಬೆಟ್ಟು ಅಧ್ಯಕ್ಷರು ಮುಂಜಣ್ಣ ಸೇವಾ ಬ್ರಿಗೇಡ್ ಸುರತ್ಕಲ್, ಉಮೇಶ್ ನಾಯ್ಕ್ ಪ್ರಾಂಶುಪಾಲರು ಸ್ನೇಹ ಟ್ಯೂಟೋರಿಯಲ್ ಕಾಲೇಜು ಉಡುಪಿ, ಸಂತೋಷ್ ಅಧ್ಯಕ್ಷರು ಬಿಜೆಪಿ ಹಿಂದುಳಿದ ಮೋರ್ಚಾ ಕಾಪು, ರಾಜೇಶ್ ಕೋಟ್ಯಾನ್‌ ಪಡಿಬಿದ್ರಿ ಮಖಂಡರು ಬಜರಂಗದಳ ಉಡುಪಿ ಜಿಲ್ಲೆ, ರಾಜೇಶ್ ಉಚ್ಚಿಲ ಮುಖಂಡರು ಜಾಗರಣ ವೇದಿಕೆ ಉಡುಪಿ ಜಿಲ್ಲೆ, ನಾರಾಯಣ ಕರ್ಕೇರ ಕೊಳ ಉದ್ಯಮಿಗಳು ಮಲ್ಪೆ, ಪ್ರಶಾಂತ್ ಭಟ್ ಪೆರಂಪಳ್ಳಿ ಉದ್ಯಮಿಗಳು ಉಡುಪಿ, ರಾಜೇಶ್‌ ಶೆಟ್ಟಿ ಅಧ್ಯಕ್ಷರು ಕಾರ್ಯ ನಿರತ ಪತ್ರಕರ್ತರ ಸಂಘ ಉಡುಪಿ ಉಪಸ್ಥಿತರಿರಲಿದ್ದಾರೆ.

Comments

https://newsdaksha.online/assets/images/user-avatar-s.jpg

0 comment

Write the first comment for this!