
ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೆ ಮೇಲ್ವೇತುವೆ ಬಳಿಯಿಂದ ಶಿಮಂತೂರು ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯ ದ್ವಾರದ ಬಳಿ ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ನಡೆದುಕೊಂಡು ಬರುತ್ತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ ಪರಾರಿಯಾದ ಘಟನೆ ನಡೆದಿದೆ.
ಸಂಜೆ ವೇಳೆ ಸ್ಥಳೀಯ ಮಹಿಳೆಯೊಬ್ಬರು ನಡೆದುಕೊಂಡು ಬರುತ್ತಿದ್ದಾಗ ಏಕಾಏಕಿ ಸ್ಕೂಟರಲ್ಲಿ(ಕೆ ಎ 20 ಎಚ್ ಎ 1312) ಬಂದ ಯುವಕನೋರ್ವ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿ ಮಹಿಳೆ ಬೊಬ್ಬೆ ಹಾಕಿದ್ದು ಜನ ಸೇರುತ್ತಿದ್ದಂತೆ ಸ್ಕೂಟರ್ ಸ್ಥಳದಲ್ಲಿ ಬಿಟ್ಟು ಯುವಕ ಪರಾರಿಯಾಗಿದ್ದಾನೆ.
ಯುವಕ ಕಳೆದ ಕೆಲವು ದಿನಗಳಿಂದ ಸ್ಥಳಕ್ಕೆ ಸ್ಕೂಟರಲ್ಲಿ ಬಂದು ತನ್ನನ್ನು ಹಿಂಬಾಲಿಸುತ್ತಿದ್ದು ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯುವಕ ಕಾರ್ಕಳ ತಾಲ್ಲೂಕು ಕಾಂಜಾರಕಟ್ಟೆ ನಿವಾಸಿ ಎನ್ನಲಾಗಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Comments
0 comment