
ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ)” ಇದರ ಚುನಾವಣಾ ಮತ್ತು ಉದ್ಘಾಟನಾ ಸಮಾರಂಭವು ಮಾರ್ಚ್ 25 ರಂದು ಸ್ತ್ರೀ ತುಳಜಾ ಭವಾನಿ ಮರಾಟಿ ಸಮುದಾಯ ಭವನ ಕುಂಜಿಬೆಟ್ಟು ಇಲ್ಲಿ ನಡೆಯಿತು.
ಸಾಂದೀಪನಿ ಸಾಧನ ಆಶ್ರಮ, ಕೇಮಾರು ಮಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ (ರಿ) ಇದರ ಸಂಸ್ಥಾಪಕ ಶಿವಕುಮಾರ್ ಕರ್ಜೆ ವಹಿಸಿದ್ದರು.
ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಹಾರ ಹಾಕಿ ಗುರುತಿಸಲಾಯಿತು ನಂತರ ಪದಾಧಿಕಾರಿಗಳ ಬೃಹತ್ ಮೆರವಣಿಗೆ ನಡೆಯಿತು.
ಈ ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ , ಬಾಳಿಗಾ ಆಸ್ಪತ್ರೆ ಉಡುಪಿ ಇಲ್ಲಿನ ಮಾನಸಿಕ ತಜ್ಞರು ಡಾ. ಪಿ.ವಿ ಭಂಡಾರಿ, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ವಿಶ್ವಾಸ್ ಅಮೀನ್, ರೂಪೇಶ್ ಕಲ್ಮಾಡಿ ನಿರ್ದೇಶಕರು ಪ್ರೈಮ್ ಟಿ ವಿ, ಗೀತಾಂಜಲಿ ಸುವರ್ಣ, ನಿರ್ದೇಶಕರು ಮೀನುಗಾರಿಕ ನಿಗಮ ಕರ್ನಾಟಕ, ವೀಣಾ ಎಸ್ ಶೆಟ್ಟಿ ಜಿಲ್ಲಾಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ವಸಂತ್ ಹೊಸಬೆಟ್ಟು, ಫ್ರೆಂಡ್ಸ್ ಸುರತ್ಕಲ್ ತುಳುನಾಡು ಬಿರುವೆರ್ ಇದರ ಸ್ಥಾಪಕಾಧ್ಯಕ್ಷರಾದ ಲೋಕೇಶ್ ಕೋಡಿಕೆರೆ, ಉಮೇಶ್ ನಾಯ್ಕ್ ಪ್ರಾಂಶುಪಾಲರು ಸ್ನೇಹ ಟ್ಯೂಟೋರಿಯಲ್ ಕಾಲೇಜು ಉಡುಪಿ, ಹಿಂದೂ ಜನ ಸೇವಾ ಟ್ರಸ್ಟ್ ಉಡುಪಿ ಅಧ್ಯಕ್ಷರು ನವೀನ್ ಪೆರ್ಡೂರು, ಹಿಂದೂ ಜಾಗರಣ ವೇದಿಕೆ ಪ್ರಮುಖರು ಉಮೇಶ್ ಪಕ್ಕಾಲ್, ಸಂತೋಷ್ ಅಧ್ಯಕ್ಷರು ಬಿಜೆಪಿ ಹಿಂದುಳಿದ ಮೋರ್ಚಾ ಕಾಪು, ರಾಜೇಶ್ ಕೋಟ್ಯಾನ್ ಪಡಿಬಿದ್ರಿ ಮಖಂಡರು ಬಜರಂಗದಳ ಉಡುಪಿ ಜಿಲ್ಲೆ, ರಾಜೇಶ್ ಉಚ್ಚಿಲ ಮುಖಂಡರು ಜಾಗರಣ ವೇದಿಕೆ ಉಡುಪಿ ಜಿಲ್ಲೆ, ನಾರಾಯಣ ಕರ್ಕೇರ ಕೊಳ ಉದ್ಯಮಿಗಳು ಮಲ್ಪೆ, ಪ್ರಶಾಂತ್ ಭಟ್ ಪೆರಂಪಳ್ಳಿ ಉದ್ಯಮಿಗಳು ಉಡುಪಿ, ರಾಜೇಶ್ ಶೆಟ್ಟಿ ಅಧ್ಯಕ್ಷರು ಕಾರ್ಯ ನಿರತ ಪತ್ರಕರ್ತರ ಸಂಘ ಉಡುಪಿ ಹಾಗೂ ಸರ್ವ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments
0 comment