ಸುರತ್ಕಲ್: ರೈಲು ಡಿಕ್ಕಿ 17 ಜಾನುವಾರುಗಳ ಮಾರಣಹೋಮ
ಅಂತ್ಯಕ್ರಿಯೆ ನೆರವೇರಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುರತ್ಕಲ್ ಪ್ರಖಂಡ

ಸುರತ್ಕಲ್ : ಜೋಕಟ್ಟೆ ಅಂಗರ ಗುಂಡಿ ಬಳಿ ನಡೆದ ಭೀಕರ ರೈಲು ಅಫಘಾತದಲ್ಲಿ 23 ಎಮ್ಮೆಗಳು ಅಸುನೀಗಿ 4 ಎಮ್ಮೆಗಳು ಅರೆ ಜೀವದಲ್ಲಿದ್ದ ಘಟನೆ ನಡೆದಿದೆ.

ವಿಷಯ ತಿಳಿದ ಬಜರಂಗದಳ ಸುರತ್ಕಲ್ ಪ್ರಾಖಂಡದ ಕಾರ್ಯಕರ್ತರು ಸ್ಥಳಕ್ಕೆ ಬೇಟಿ ನೀಡಿ ಬಿಸಿಲಿನ ಬೇಗೆಗೆ ಅರೆ ಜೀವದಲ್ಲಿದ್ದ ಕೋಣಗಳಿಗೆ ನೀರುಣಿಸಿ ಪಣಂಬೂರು ಠಾಣೆಗೆ ಮಾಹಿತಿ ನೀಡಿ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದ್ದಾರೆ.

ಆದರೂ ಅದರಲ್ಲಿ 3 ಕೋಣಗಳು ಮೃತ ಪಟ್ಟಿದೆ. ಜೆಸಿಬಿ ಸಹಾಯದಿಂದ ಸ್ಥಳದಲ್ಲಿದ್ದ  7 ರಿಂದ 8 ಕೋಣಗಳ ಅಂತ್ಯಕ್ರಿಯೆ ಮಾಡಲಾಯಿತು. ಹೆಚ್ಚಿನ ಕೋಣಗಳು ರೈಲ್ವೇ ಟ್ರಾಕ್ ನಾ ಆಚೆ ಬದಿ ಇದ್ದ ಕಾರಣ ಹಾಗೂ 28,000ವಾಲ್ಟ್ ನ ತಂತಿಗಳು ಇದ ಕಾರಣ ರೈಲ್ವೇ ಫೈರ್ ಡಿಪಾರ್ಟ್ಮೆಂಟ್ ಗೇ ವಿಷಯ ತಿಳಿಸಿ, ಕಾರ್ಯಕರ್ತರ ಹಾಗೂ ಊರಿನವರ ಸಹಾಯದೊಂದಿಗೆ ರಕ್ಷಣಾ ಕಾರ್ಯ ನಡೆದಿದೆ.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕ ಪ್ರೀತಂ ಶೆಟ್ಟಿ ಕಾಟಿಪಳ್ಳ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುರತ್ಕಲ್ ಪ್ರಖಂಡ ಸಂಯೋಜಕ ಅಶಿತ್ ಕಾಟಿಪಳ್ಳ, ಬಜರಂಗದಳ ಗೋ ರಕ್ಷಾ ಪ್ರಮುಖ ವೈಶಕ್ ಕುಳಾಯಿ ಹಾಗೂ ಕಾಟಿಪಳ್ಳ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು ಹಾಗೆಯೇ ಬೈಕಾಂಪಡಿಯ ಸ್ವಯಂ ಸೇವಕ, ಗೋ ಪ್ರೇಮಿ ರೋಷನ್ ಪುತ್ರನ್  ಕೊನೆವರೆಗೂ ಇದ್ದು ಎಲ್ಲಾ ಕೋಣಗಳ ಅಂತ್ಯ ಕ್ರಿಯೆ ಮಾಡಲಾಯಿತು. ಇವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ   ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುರತ್ಕಲ್ ಪ್ರಖಂಡ ಧನ್ಯವಾದ ತಿಳಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!