ಮಂಗಳೂರು: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ನೆಪದಲ್ಲಿ  3.36 ಲಕ್ಷ ದೋಚಿ ಪರಾರಿ
ಆನ್‌ಲೈನ್‌ನಲ್ಲಿ ಹಣ ಹೂಡಿಕೆ ನೆಪದಲ್ಲಿ 3.36 ಲಕ್ಷ ರೂ ವಂಚನೆ

ಮಂಗಳೂರು:ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಕಮಿಷನ್ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 3.36 ಲಕ್ಷ ರೂ. ದೋಚಿ ಪರಾರಿಯಾಗಿರುವ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟೆಲಿಗ್ರಾಮ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರಿಗೆ ಆನ್‌ಲೈನ್‌ ಮೂಲಕ ದೊಡ್ಡ ಮೊತ್ತದ ಕಮಿಷನ್‌ನೊಂದಿಗೆ ಹೂಡಿಕೆ ಅವಕಾಶವನ್ನು ನೀಡುವುದಾಗಿ ಸಂದೇಶ ಕಳುಹಿಸುತ್ತಿದ್ದ.

ಇನ್ನು ದೂರುದಾರರು ಈ ಸಂದೇಶವನ್ನು ನಂಬಿ ಹಂತಹಂತವಾಗಿ ಫೆಬ್ರವರಿ 14 ರಿಂದ 16ರವರೆಗೆ 1.88 ಲಕ್ಷ, 75, 000 ಮತ್ತು 1 ಲಕ್ಷ ರೂ ಅನ್ನು ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೊಯು ಆನ್‌ಲೈನ್‌ ಮೂಲಕ ಕಮಿಷನ್‌ ಹೂಡಿಕೆ ಮಾಡಿದ ಮೊತ್ತವನ್ನು ದೂರುದಾರರಿಗೆ ಮತ್ತೆ ಹಿಂತಿರುಗಿಸದೇ ಪರಾರಿಯಾಗಿದ್ದು ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!