ಏಕಕಾಲದಲ್ಲಿ ಆರು ರಾಜ್ಯಗಳ 100 ಸ್ಥಳಗಳಲ್ಲಿ NIA ದಾಳಿ
ಆರು ರಾಜ್ಯಗಳ 100 ಸ್ಥಳಗಳಲ್ಲಿ NIA ದಾಳಿ

ರಾಷ್ಟ್ರೀಯ ತನಿಖಾ ಸಂಸ್ಥೆಯೂ 6 ರಾಜ್ಯಗಳ 100 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯದ ಹಲವು ಪ್ರದೇಶದಲ್ಲಿ ಈ ದಾಳಿ ನಡೆದಿದ್ದು,ಭಯೋತ್ಪಾದಕರು ಮತ್ತು ದರೋಡೆಕೋರರ ನಂಟಿನ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದೆ. ಭಯೋತ್ಪಾದಕ ನಿಧಿಯ ಮೂಲಕ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿರುವ ಉಗ್ರರ ಅಡಗುತಾಣಗಳ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿ ಅವರ ಸಹಚರರಿದ್ದ ಪ್ರದೇಶದಲ್ಲಿ ದಾಳಿ ನಡೆಸಿದ್ದು,ಜಸ್ವಿಂದರ್ ಸಿಂಗ್ ಮುಲ್ತಾನಿ ಎಂಬಾತ ಕಳೆದ ವರ್ಷ ಚಂಡೀಗಢದ ಮಾಡೆಲ್ ಬುರೈಲ್ ಜೈಲಿನ ಬಳಿ ಬಾಂಬ್ ಇರಿಸಿದ್ದ. ಲುಧಿಯಾನ ಕೋರ್ಟ್ ಸ್ಫೋಟದ ಮಾಸ್ಟರ್‌ಮೈಂಡ್‌ಗಾಗಿ ಆರೋಪದಲ್ಲಿ 2021 ರಲ್ಲಿ ಜರ್ಮನಿಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಎನ್ ಐಎ ಮೂಲಗಳ ಪ್ರಕಾರ, ವಿದೇಶದಲ್ಲಿ ಕುಳಿತಿರುವ ದರೋಡೆಕೋರರು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಹಣ ನೀಡುವ ಮೂಲಕ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!