ಮಂಗಳೂರು:70 ಲಕ್ಷ ರೂ. ಲಾಟರಿ ಗೆದ್ದರೂ ಪತ್ತೆಯಾಗದ ಅದೃಷ್ಟಶಾಲಿ.!
ಅದೃಷ್ಟವಂತನಿಗಾಗಿ ಕಾಯುತ್ತಿರುವ ಲಾಟರಿ ಏಜೆನ್ಸಿ

ಮಂಗಳೂರು: ದಿಡೀರ್ ಶ್ರೀಮಂತರಾಗಬೇಕು ಎಂದು ಜನರು ಲಾಟರಿ ತೆಗೆದು ಬಹುಮಾನ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಂದು ಕಡೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೂ, ಅದೃಷ್ಟವಂತ ಈವರೆಗೂ ಬಂಪರ್ ಬಹುಮಾನ ಬಂದ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಈ ಲಾಟರಿ ಏಜೆನ್ಸಿಯವರು ಬಂಪರ್ ಬಹುಮಾನ ಬಂದ ವಿಜೇತನಿಗಾಗಿ ಕಾಯುತ್ತಿದ್ದಾರೆ.

ತಲಪಾಡಿಯಲ್ಲಿರವ ಅಮಲ್ ಕನಕದಾಸ ಅವರಿಗೆ ಸೇರಿದ ತಲಪಾಡಿಯ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಕೇರಳ ರಾಜ್ಯದ ಅಕ್ಷಯ ಲಾಟರಿಯ ಬಂಪರ್ ಬಹುಮಾನ ಬಂದಿದ್ದು, ಕೇರಳ ಗಡಿ ಭಾಗವಾಗಿರುವ ಕರ್ನಾಟಕದ ಮಂಗಳೂರು ಸೇರಿದಂತೆ ಮಂಜೇಶ್ವರರ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಯಲ್ಲಿ ಮಾರಟವಾದ ಮೇ 7ರ ಅಕ್ಷಯಾ ಲಾಟರಿ ಎ.ಟಿ. 317545 ಟಿಕೆಟ್‍ಗೆ ಎಪ್ಪತ್ತು ಲಕ್ಷ ಬಂಪರ್ ಬಹುಮಾನ ಬಂದಿದ್ದು, ಈ ಟಿಕೆಟ್ ಪಡದುಕೊಂಡ ಅದೃಷ್ಟ ಶಾಲಿಗೆ ಹುಡುಕಾಟ ನಡೆಯುತ್ತಿದೆ.

ಕನಕದಾಸ ಅವರ ಏಜೆನ್ಸಿಗೆ ಕೆಲ ತಿಂಗಳ ಹಿಂದೆ ಕೆ.ಸಿ. ರೋಡ್‍ನ ವ್ಯಕ್ತಿಯೊಬ್ಬರಿಗೆ 75 ಲಕ್ಷ ರೂ ಮತ್ತು ಕೋಟೆಕಾರು ಒಲವಿನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೆಕ್ಯುರಿಟಿ ಗಾರ್ಡ್‍ಗೆ ಒಂದು ಕೋಟಿ ರೂ ಬಹುಮಾನ ಬಂದಿದ್ದು, ಒಟ್ಟು ನಾಲ್ಕು ಬಾರಿ ಬಂಪರ್ ಬಹುಮಾನ ಬಂದಿತ್ತು. ಇದೀಗ ಅದೃಷ್ಟಶಾಲಿಯ ಹುಡುಕಾಟ ನಡೆಯುತ್ತಿದ್ದು, ಕರ್ನಾಟಕ - ಕೇರಳ ಗಡಿಭಾಗದವರೇ ಈ ವಿಜೇತರು ಇರಬಹುದು ಎಂದು ಅಮಲ್ ಕನಕದಾಸ್ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!