ಕೆಟ್ಟ ಹವ್ಯಾಸಗಳಿಂದ ದೂರವಾಗಬೇಕಾ.? ಈ ಅಂಶಗಳನ್ನು ಪಾಲನೆ ಮಾಡಿ
ಕೆಟ್ಟ ಹವ್ಯಾಸಗಳಿಂದ ದೂರವಾಗಬೇಕಾ.? ಈ ಅಂಶಗಳನ್ನು ಪಾಲನೆ ಮಾಡಿ

ಕೆಟ್ಟ ಅಭ್ಯಾಸಗಳನ್ನು ಬಿಡುವುದು ಸುಲಭವಲ್ಲ. ಅವು ಕೆಟ್ಟದ್ದೆಂದು ತಿಳಿದಿದ್ದರೂ ಅಭ್ಯಾಸಬಲದಿಂದ ಮತ್ತೆ ಅವುಗಳನ್ನೇ ಮಾಡುತ್ತಿರುತ್ತೇವೆ. ಹಲವು ರೀತಿಯಲ್ಲಿ ಕೆಟ್ಟ ಅಭ್ಯಾಸಗಳನ್ನು ಅರಿತೋ ಅರಿಯದೆಯೋ ನಾವು ರೂಢಿಸಿಕೊಂಡಿರುತ್ತೇವೆ. ಅತಿಯಾಗಿ ತಿನ್ನುವುದು, ವಿಳಂಬ ಪ್ರವೃತ್ತಿ, ಸೋಮಾರಿತನ, ಉಗುರು ಕಚ್ಚುವುದು ಇಂತಹ ಯಾವುದೇ ಅಭ್ಯಾಸಗಳಾಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೆಗೆಟಿವ್ ಯೋಚನೆಗಳೇ ಆಗಿರಬಹುದು. ಅನೇಕರಲ್ಲಿ ಈ ಕೆಟ್ಟ ಅಭ್ಯಾಸ ಕಂಡುಬರುತ್ತದೆ. ಅವರು ನೆಗೆಟಿವ್ ಯೋಚನೆಗಳಲ್ಲೇ ಮುಳುಗಿರುತ್ತಾರೆ. ಪರಿಣಾಮವಾಗಿ ಕೆಟ್ಟ ವರ್ತನೆ ಮಾಡುತ್ತಾರೆ. 

ಅನೇಕ ರೀತಿಯ ವ್ಯಸನಗಳಿಗೆ ಮೊರೆ ಹೋಗಬಹುದು. ಇದರಿಂದ ದೈನಂದಿನ ಜೀವನದಲ್ಲಿ ವ್ಯತ್ಯಾಸವಾಗುತ್ತದೆ. ಹೀಗೆ, ಕೆಟ್ಟ ಅಭ್ಯಾಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆ. ಇಂತಹ ಅಭ್ಯಾಸಗಳಿಂದ ನಮ್ಮನ್ನು ನಾವು ಹೊರತರುವುದು ಖಂಡಿತವಾಗಿ ಸುಲಭವಲ್ಲ. ಆದರೆ, ಮನೋತಜ್ಞರ ಸಲಹೆ ಪ್ರಕಾರ ನಡೆದುಕೊಂಡಲ್ಲಿ ಸಾಧ್ಯ. ಕೆಟ್ಟ ಅಭ್ಯಾಸಗಳನ್ನು ಹೊಂದಿರುವವರು ಅಧಿಕ ತೂಕ ಹೊಂದಬಹುದು, ಖಿನ್ನತೆ, ಆತಂಕಕ್ಕೆ ಒಳಗಾಗಬಹುದು. ಇವುಗಳಿಂದ ನಮ್ಮ ಸಾಮರ್ಥ್ಯ ಸರಿಯಾಗಿ ಬಳಕೆಯಾಗದಂತೆ ಆಗುತ್ತವೆ. ಹೀಗಾಗಿ, ಕೆಟ್ಟ ಅಭ್ಯಾಸಗಳನ್ನು ದೂರವಿಡುವುದು ಅಗತ್ಯ.

ಕೆಟ್ಟ ಅಭ್ಯಾಸಗಳು ಸಾಮಾನ್ಯವಾಗಿ ಆತಂಕ ಮತ್ತು ಒತ್ತಡದಿಂದ ಆರಂಭವಾಗುತ್ತವೆ. ಇನ್ನೊಂದು ಪ್ರಮುಖ ಕಾರಣ ಬೇಸರ . ಆತ್ಮಾಭಿಮಾನದ ಕೊರತೆ ಸೇರಿದಂತೆ ಹಲವು ರೀತಿಯ ಮಾನಸಿಕ ಕಾರಣಗಳನ್ನು ಸಹ ಗುರುತಿಸಲಾಗಿದೆ. ಆದರೆ, ಯಾವುದೇ ಕೆಟ್ಟ ಅಭ್ಯಾಸಗಳನ್ನು ಕೇವಲ ಐದು ಸರಳ ಹಂತಗಳ ಮೂಲಕ ಬಿಟ್ಟುಬಿಡಲು ಸಾಧ್ಯ.

ಕೆಟ್ಟ ಅಭ್ಯಾಸಗಳನ್ನು ಬಿಡಬೇಕೆಂದರೆ, ಮೊದಲಿಗೆ ಅವುಗಳನ್ನು ಗುರುತಿಸಬೇಕು. ವರ್ತನೆಗೆ ಸಂಬಂಧಿಸಿ ಪ್ರಾಮಾಣಿಕರಾಗಿದ್ದರೆ ಗುರುತಿಸಬಹುದು. ಆದರೂ ಇದು ಕಷ್ಟವೇ. ಏಕೆಂದರೆ, ದೈನಂದಿನ ಅಭ್ಯಾಸವಾಗಿದ್ದಾಗ ಅದು ಸಹಜವೆಂದು ಅನಿಸಬಹುದು. ಆದರೆ, ಸ್ವ ಅರಿವು ಹೆಚ್ಚಿಸಿಕೊಳ್ಳುವ ಮೂಲಕ ಗುರುತಿಸಬೇಕು. ಹಾಗಿದ್ದರೆ, ಯಾವ ಅಭ್ಯಾಸವನ್ನು ಕೆಟ್ಟದ್ದು ಎಂದು ಪರಿಗಣಿಸಬಹುದು? ಯಾವುದೇ ಅಭ್ಯಾಸ ನಮ್ಮ ಜೀವನ ಆರೋಗ್ಯ ಸಂಬಂಧ ಉತ್ಪಾದಕತೆಯನ್ನು ಕುಂಠಿತವಾಗಿಸಿದರೆ ಅವು ಕೆಟ್ಟ ಅಭ್ಯಾಸ.

ಆರಂಭದಲ್ಲಿ ಸಣ್ಣ ಗುರಿ ನಿಗದಿ ಮಾಡಿಕೊಂಡು ಮುಂದುವರಿಯಬೇಕು. ಸಾಧಿಸುವಂತಹ ಚಿಕ್ಕ ಗುರಿಗಳ ಮೂಲಕ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಏಕಾಏಕಿ ಅವಾಸ್ತವಿಕ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡರೆ ಕೆಟ್ಟ ಹವ್ಯಾಸ ಬಿಡುವುದು ಕಷ್ಟ.

ಈ ಇಡೀ ಪ್ರಕ್ರಿಯೆಯುದ್ದಕ್ಕೂ ನಿಮಗೆ ನೀವೇ ಪ್ರೇರಣೆಯಂತೆ ಮುಂದುವರಿಯಬೇಕು. ಹೇಳಿದಷ್ಟು ಇದು ಸುಲಭವಲ್ಲ. ಆದರೆ, ನಿಶ್ಚಿತವಾಗಿ ಮುಂದುವರಿದರೆ ಸಾಧ್ಯವಾಗುತ್ತದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!