ದಕ್ಷಿಣ ಕೊರಿಯಾ ಏಷ್ಯಾ-ಪೆಸಿಫಿಕ್ ಮಾಸ್ಟರ್ಸ್ ಗೇಮ್ಸ್ ನಲ್ಲಿ ಕರಾವಳಿಯ ಶಿವಾನಂದ ಶೆಟ್ಟಿ ಸಾಧನೆ
ಬಂಗಾರಕ್ಕೆ ಕೊರಳೊಡ್ಡಿದ ಶಿವಾನಂದ ಶೆಟ್ಟಿ

ದಕ್ಷಿಣ ಕೊರಿಯಾದ ಜಿಯೋನ್ ಬಕ್ ನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಮಾಸ್ಟರ್ಸ್ ಗೇಮ್ಸ್ 2023 ನಲ್ಲಿ ಕರಾವಳಿಯ ಅಂತಾರಾಷ್ಟ್ರೀಯ ಅಥೇಟ್ ಶಿವಾನಂದ ಶೆಟ್ಟಿಯವರು 2 ಚಿನ್ನ 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

10,000 ಮೀ. ಹಾಗೂ 5000 ಮೀ. ಮ್ಯಾರಥಾನ್ ಓಟದಲ್ಲಿ ನಲ್ಲಿ ಚಿನ್ನವನ್ನು ಗೆದ್ದ ಶಿವಾನಂದ್ ಶೆಟ್ಟಿ ಬಳಿಕ 1500 ಮೀ. ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ದೇಶ - ವಿದೇಶಗಳಲ್ಲಿ ನಡೆದ ಸುಮಾರು ೫೦೦ ಮೆಗಾ ಈವೆಂಟ್ ಗಳಲ್ಲಿ ಭಾಗವಹಿಸಿರುವ ಶಿವಾನಂದ ಶೆಟ್ಟಿಯವರು ನೂರಾರು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಮೇ 12 ರಂದು ಈ ಮೆಗಾ ಟೂರ್ನಿ ಆರಂಭವಾಗಿದ್ದು ಮೇ 20 ರ ವರೆಗೆ ನಡೆಯಲಿದೆ. ಈ ಕ್ರೀಡಾ ಮೇಳದಲ್ಲಿ ಸುಮಾರು 26 ಕ್ರೀಡೆಗಳಿದ್ದು ವಿಶ್ವದೆಲ್ಲೆಡೆಯಿಂದ ಸುಮಾರು 10,000 ಅಥೀಟ್ ಗಳು ಭಾವಹಿಸಲಿದ್ದಾರೆ.

 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!