ಕೇರಳ ಸ್ಟೋರಿ ನೋಡಿ ಬದಲಾದ ಹಿಂದೂ ಯುವತಿ : ಆದರೂ ಬಿಡದ ಮುಸ್ಲಿಂ ಯುವಕ ಅತ್ಯಾಚಾರ ಮಾಡಿಯೇ ಬಿಟ್ಟ.!
ನಡೆಯುತ್ತಲೇ ಇದೇ ಲವ್ ಜಿಹಾದ್

ದೇಶಾದ್ಯಂತ ವಿವಾದದ ಕಿಡಿಯಿಂದಲೇ ಸದ್ದು ಮಾಡಿದ ‘ಲವ್‌ ಜಿಹಾದ್‌’ ಕಥೆಯಾಧಾರಿತ ಸಿನಿಮಾ ‘ದಿ ಕೇರಳ ಸ್ಟೋರಿ’ ನೋಡಲು ಜನರು ಧಾವಿಸುತ್ತಿದ್ದಾರೆ. ಈ ಮಧ್ಯೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ಹಿಂದೂ ಯುವತಿಯ ಮನಸ್ಸು ಬದಲಾಗಿ ಪ್ರೇಮಿಗಳ ಮಧ್ಯೆ ವಾಗ್ವಾದ ಶುರುವಾಗಿ ಮುಸ್ಲಿಂ ಯುವಕ ತನ್ನ ಹಿಂದೂ ಪ್ರೇಯಸಿಯನ್ನೇ ಅತ್ಯಾಚಾರಗೈದಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

ಯುವಕ 12ನೇ ತರಗತಿವರೆಗೆ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಯುವತಿ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವರಿಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಕೋಚಿಂಗ್ ಸೆಂಟರ್‌ನಲ್ಲಿ ಪರಿಚಯವಾಗಿದ್ದು, ನಂತರ ಪ್ರೇಮಾಂಕುರವಾಗಿತ್ತು. ಇತ್ತೀಚೆಗೆ ಈ ಪ್ರೇಮಿಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ನೋಡಿದ ನಂತರ ಹಿಂದೂ ಯುವತಿ ತನ್ನ ಮುಸ್ಲಿಂ ಪ್ರಿಯಕರನ ಜೊತೆ ಚರ್ಚೆಗೆ ತೊಡಗಿದ್ದಾಳೆ. ಚರ್ಚೆ ಜಗಳವಾಗಿ ಮಾರ್ಪಟ್ಟು, ಕೋಪಗೊಂಡ ಆತ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಜೊತೆಗೆ ಅತ್ಯಾಚಾರ ಎಸಗಿ ಆಕೆಯನ್ನು ಬಿಟ್ಟು ತೆರಳಿದ್ದಾನೆ. ಈ ಬಗ್ಗೆ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ದೂರಿನಲ್ಲಿ ‘ ಪ್ರೀತಿಸಿ, ಮದುವೆಯಾಗುತ್ತೀನಿ ಎಂದು ನಂಬಿಸಿದ ಮುಸ್ಲಿಂ ಯುವಕ ಕಳೆದ ಕೆಲ ಸಮಯದಿಂದ ತನ್ನ ಒಟ್ಟಿಗೆ ವಾಸಿಸುತ್ತಿದ್ದ. ನಂತರ ಮದುವೆಯಾಗಬೇಕಾದರೆ ನೀನು ಇಸ್ಲಾಂಗೆ ಮತಾಂತರವಾಗಬೇಕು ಎಂದು ಆಕೆಗೆ ಪದೇ ಪದೇ ಮಾನಸಿಕವಾಗಿ ಪೀಡಿಸುತ್ತಿದ್ದ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು 23 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!