ಪುತ್ತೂರು: ಪೊಲೀಸ್ ದೌರ್ಜನ್ಯ ಪ್ರಕರಣ - ಯುವಕನ ಕಿವಿ ತಮಟೆಗೆ ಹಾನಿ
ಹೋರಾಟದ ಎಚ್ಚರಿಕೆ ನೀಡಿದ ಅರುಣ್ ಪುತ್ತಿಲ

ಪುತ್ತೂರು: ಪೊಲೀಸ್ ದೌರ್ಜನ್ಯ ಸಂದರ್ಭ ಅವಿನಾಶ್ ಎಂಬ ಯುವಕನ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವರದಿ ಹೊರಬಿದ್ದಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿಯನ್ನು ಭೇಟಿಯಾಗಿ ಡಿವೈಎಸ್‌ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದು ಒಟ್ಟು 11 ಜನರನ್ನು ಬಂಧಿಸಿ ಪೊಲೀಸರು ಡಿವೈಎಸ್ಪಿ ಕಚೇರಿಯಲ್ಲೇ ತೀವ್ರ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇನ್ನು ಮೇ.15 ರ ಮಧ್ಯರಾತ್ರಿ ಅರುಣ್ ಪುತ್ತಿಲ ಡಿವೈಎಸ್ಪಿ ಕಚೇರಿಗೆ ಹೋಗಿ ಹಲ್ಲೆಗೊಳಗಾದವರ ಮುಚ್ಚಲಿಕೆ ಬರೆದು ಬಿಡುಗಡೆಗೊಳಿಸಿಕೊಂಡು ಬಂದಿದ್ದರು. ನಂತರ ಹಲ್ಲೆಗೊಳಗಾದವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮತ್ತೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುತ್ತೂರಿನ ಡಿವೈಎಸ್ಪಿ, ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ, ಪುತ್ತೂರಿನ ಪೊಲೀಸ್ ಕಾನ್ಸ್ಟೆಬಲ್ ವಿರುದ್ದ ಪ್ರಕರಣ ದಾಖಲಿಸಿ ಎಸ್ಐ ಮತ್ತು ಪಿಸಿಯನ್ನು ಅಮಾನತು ಮಾಡಿ, ಡಿವೈಎಸ್ಪಿಯನ್ನು ರಜೆಯಲ್ಲಿ ಕಳುಹಿಸಲಾಗಿದೆ.

ಇನ್ನು ತೀವ್ರ ಗಾಯಗೊಂಡ ಅವಿನಾಶ್ ಅವರ ಕಿವಿ ನೋವು ಕಡಿಮೆಯಾಗದ ಕಾರಣ ಕಿವಿಯ ಸ್ಕ್ಯಾನಿಂಗ್ ಮಾಡಿದಾಗ ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಹೊರ ಬಂದಿದೆ. ಕೂಡಲೇ ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಅಮಾಟೆಯನ್ನು ಭೇಟಿಯಾದ ಅರುಣ್ ಕುಮಾರ್ ಪುತ್ತಿಲ ಎರಡು ದಿನದಲ್ಲಿ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದು, ಕ್ರಮ ಆಗದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!