ಉಡುಪಿ ಮಂಗಳೂರು ಹೈವೆಯಲ್ಲಿ ಕಾರ್ ರೇಸ್ – ನಾಲ್ವರು ಪೊಲೀಸ್ ವಶಕ್ಕೆ…!
ಅಡ್ಡಾದಿಡ್ಡಿ ಕಾರು ಚಲಾವಣೆ - ನಾಲ್ವರ ವಿರುದ್ದ ಕೇಸು, ವಾಹನ ಪೊಲೀಸ್ ವಶಕ್ಕೆ

ಕಾಪು: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ರೇಸ್ ಮಾಡಲು ಹೋದು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಸಂಬಂಧ ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನ ಚಾಲಕರನ್ನು ಉಡುಪಿಯ ಶಾನೂನ್ ಡಿಸೋಜ(25), ಉಡುಪಿ‌ ಕೊಡಂತೂರಿನ ವಿವೇಕ್(23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ ಅಯಾನ್( 24) ಹಾಗೂ ಕುಂಜಿಬೆಟ್ಟು ನಿವಾಸಿ ಮಿಶಾಲುದ್ದೀನ್ (23) ಎಂದು ಗುರುತಿಸಲಾಗಿದೆ. ಇವರ ಮಹೀಂದ್ರಾ ಜೀಪು, ಕ್ರೆಟಾ ಕಾರು, ಫಾರ್ಚುನರ್‌ ಕಾರು, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ರಾ.ಹೆ 66 ರಸ್ತೆಯಲ್ಲಿ 1 ಜೀಪು ಹಾಗೂ 3 ಕಾರುಗಳನ್ನು ಅದರ ಚಾಲಕರುಗಳು ಅತೀ ವೇಗ ಮತ್ತು ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್‌ ಆಗುತ್ತಿರುವ ಬಗ್ಗೆ ದೂರು ಬಂದಿತ್ತು. ಅದರಂತೆ ಪರಿಶೀಲಿಸಿದಾಗ ಈ ವಿಡಿಯೋ ಕಟಪಾಡಿ ಸಮೀಪದ ಮೂಡಬೆಟ್ಟು ಗ್ರಾಮದಿಂದ ಮೂಳೂರು ಗ್ರಾಮವರೆಗಿನ ರಾ.ಹೆ 66 ಉಡುಪಿ- ಮಂಗಳೂರು ರಸ್ತೆಯಲ್ಲಿ ಮೇ 19ರಿಂದ ಮೇ 23ರ ಮಧ್ಯಾವಧಿಯಲ್ಲಿ ಮಾಡಿರುವುದು ಎಂಬುದು ತಿಳಿದುಬಂತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಯೋದಲ್ಲಿನ ವಾಹನಗಳ ನಂಬ್ರಗಳನ್ನು ಪರಿಶೀಲಿಸಿ ವಾಹನಗಳ ಗುರುತು ಪತ್ತೆ ಹಚ್ಚಿದರು. ಅದರಂತೆ ವಾಹನ ಚಾಲಕರು ಮತ್ತು ವಾಹನಗಳನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಈ ಬಗ್ಗೆ ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!