ಮಂಗಳೂರು: ಶಾಲೆಯ ಪಕ್ಕದಲ್ಲೇ ಕಲ್ಲು ಬ್ಲಾಸ್ಟ್ - ಅಕ್ರಮ ಗಣಿಗಾರಿಕೆ
ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಹರಾ ಶಾಲೆಯ ಬಳಿ ನಡೆಯುತ್ತಿರುವ ಘಟನೆ

ಮಂಗಳೂರು: ಶಾಲೆಗೆ 50ಮೀಟರ್ ಕೂಡ ದೂರವಿಲ್ಲದ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಘಟನೆ ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಹರಾ ಶಾಲೆ ಬಳಿ ನಡೆಯುತ್ತಿದೆ.

ಶಾಲಾ ಮಕ್ಕಳ ಭವಿಷ್ಯ ಲೆಕ್ಕಿಸದೇ ಕಲ್ಲು ಬ್ಲಾಸ್ಟ್. ಊರಿನ ಜನರಿಗೆ ಗಜ ಗಾತ್ರದ ಕಲ್ಲುಗಳನ್ನು ಹೊತ್ತು ಹೋಗುವ ಲಾರಿಗಳ ಧೂಳು, ಶಬ್ಧದ ತೊಂದರೆಯ ಜೊತೆಗೆ ಗಣಿಗಾರಿಕೆಯ ಶಾಪ ಶಾಲೆಗೂ ತಟ್ಟಿದೆ.

ಈ ಬಗ್ಗೆ ಹಲವು ಸಮಯಗಳ ಹಿಂದೆ ನಮ್ಮ ಮಾಧ್ಯಮದಲ್ಲಿ ವರದಿ ಮಾಡಿದ ಬಳಿಕ ಗಣಿಗಾರಿಕೆ ನಿಲ್ಲಿಸಿದ್ದರು. ಸದ್ಯ ಪುನಃ ಅದೇ ಜಾಗದಲ್ಲಿ ಮತ್ತೆ ಪ್ರಾರಂಭಿಸಿದ್ದಾರೆ. ಇವರನ್ನು ಪ್ರಶ್ನಿಸಲು ಯಾವ ಅಧಿಕಾರಿಗಳು ಇಲ್ಲಾ.. ಯಾವ ಜನ ನಾಯಕರು ಇಲ್ಲಾ...? ಇದೆಲ್ಲ ಹಣದ ಪ್ರಭಾವದಲ್ಲಿ ನಡೆಯುತ್ತಿದೆ ಎನ್ನುವುದು ಜನರ ಅಭಿಪ್ರಾಯ.

ಇದರ ಬಗ್ಗೆ ಶಾಲಾ ಆಡಳಿತದ ಬಳಿ ಕೇಳಿದಾಗ ಇದಕ್ಕೆ ಸೈಟ್‌ ಪರ್ಮಿಷನ್ ದೊರೆತಿದೆ ಎನ್ನುತ್ತಾರೆ. ಇದರ ಜೊತೆ ಶಾಲೆಯಲ್ಲಿ ಅಗ್ರಿಮೆಂಟ್ ಕೂಡ ಮಾಡಿದ್ದಾರಂತೆ. ಶಾಲೆಗೆ ಏನಾದರೂ ತೊಂದರೆಯಾದರೆ ಅವರೇ ಎಲ್ಲಾ ಖರ್ಚು ವೆಚ್ಚ ನೀಡುವುದಾಗಿ ಅಗ್ರಿಮೆಂಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಗಣಿಗಾರಿಕೆ ಅಥವಾ ಅಗ್ರಿಮೆಂಟ್ ಬಗ್ಗೆ ಶಾಲಾ ಮಕ್ಕಳ ಪೋಷಕರಿಗೆ ತಿಳಿಸಿಲ್ಲವಂತೆ.

ಶಾಲೆ ಬಿದ್ದರೆ ಇನ್ನೊಂದು ಶಾಲೆ ಕಟ್ಟಬಹುದು, ಆದರೆ ಮಕ್ಕಳಿಗೆ ಏನಾದರೂ ಆದರೆ, ಮಕ್ಕಳನ್ನು ಹಿಂದಿರುಗಿಸಲು ಸಾದ್ಯವೇ ಎನ್ನುವ ಪ್ರಶ್ನೆಗೆ ಇವರ ಬಳಿ ಉತ್ತರವಿಲ್ಲ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!